ನಿವೃತ್ತ SP ಅರುಣ ಮಗೆಣ್ಣವರ ಪತ್ನಿ ಇನ್ನಿಲ್ಲ

Suddi Sante Desk

ಧಾರವಾಡ –

ನಿವೃತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಕಲಾ ಎ ಮಗೆಣ್ಣವರ ನಿಧರಾಗಿದ್ದಾರೆ. 62 ವಯಸ್ಸಿನ ಶಶಿಕಲಾ ಮಗೆಣ್ಣವರ ಇಂದು ನಸುಕಿನ ಜಾವ ಹುಬ್ಬಳ್ಳಿಯ ವಿಜಯನಗರ ನಿವಾಸದಲ್ಲಿ ಕೊನೆಯುಸಿರೆಳೆದರು.

ಕಳೆದ ಮೂರು ನಾಲ್ಕು ತಿಂಗಳಿನಿಂದ ಅನಾರೋಗ್ಯವಾಗಿದ್ದರು. ಮನೆಯಲ್ಲಿಯೇ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು.ಇಂದು ಬೆಳಗಿನ ಜಾವ ನಿಧನರಾದರು . ವಿಜಯನಗರದಲ್ಲಿರುವ ನಿವಾಸದಲ್ಲಿ ಕೊನೆಯುಸಿರೆಳೆದರು .

ನಿವೃತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ ಮಗೆಣ್ಣವರ ಅವರ ಪತ್ನಿ ಹಾಗೂ ಹಿಂದುಳಿದ ವರ್ಗಗಳ ಅಯೋಗದ ಅಧ್ಯಕ್ಷರಾಗಿದ್ದ, ಮಾಜಿ ಸಚಿವ ಎಲ್.ಜಿ.ಹಾವನೂರ ಅವರ ಸಹೋದರನ ಪುತ್ರಿಯಾಗಿರುವ ಇವರು ಒರ್ವ ಪುತ್ರಿ, ಪತಿ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಹುಬ್ಬಳ್ಳಿ ಕೇಶ್ವಾಪುರದ ಮುಕ್ತಿಧಾಮದಲ್ಲಿ ಜರುಗಿತು.ಇನ್ನೂ ಪುಣ್ಯತಿಥಿ ಕಾರ್ಯಕ್ರಮ ಡಿಸೆಂಬರ್ 25 ರಂದು ಮಯೂರ ಎಸ್ಟೇಟ್ ನಲ್ಲಿರುವ ವಿಜಯನಗರದ ನಿವಾಸದಲ್ಲಿ ಜರುಗಲಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.