ನವಲಗುಂದ –
ಜನರ ಜೀವದ ಜೊತೆ ಪಟಾಕಿ ವ್ಯಾಪಾರಸ್ಥರ ಚಲ್ಲಾಟ – ಪಟಾಕಿ ವ್ಯಾಪಾರದಲ್ಲಿ ರಾಮನ ಲೆಕ್ಕ…ಕೃಷ್ಣನ ಲೆಕ್ಕ ಹೌದು ಹಾವೇರಿಯ ಪಟಾಕಿ ಗುದಾಮಿನ ದುರಂತ ಮಾಸುವ ಮುನ್ನವೇ ಧಾರವಾಡ ಜಿಲ್ಲೆಯ ಪಟಾಕಿ ವ್ಯಾಪಾರಸ್ಥರು ಮತ್ತೊಂದು ಡೊಡ್ಡ ಅನಾಹುತಕ್ಕಿ ಆವ್ಹಾನ ನೀಡಲು ಸಜ್ಜಾಗಿದ್ದಾರೆ.
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ಕಡಿಮೆ ದರದಲ್ಲಿ ಪಟಾಕಿ ದೊರೆಯುತ್ತವೆ ಎಂಬ ಕಾರಣಕ್ಕೆ ಸುತ್ತ ಮುತ್ತಲಿನ ತಾಲೂಕು ಜಿಲ್ಲೆಗ ಳಿಂದ ಲಕ್ಷಾಂತರ ಜನ ಅಲ್ಲಿ ಪಟಾಕಿ ಖರೀದಿಗೆ ಹೋಗುತ್ತಾರೆ.ಹೀಗೆ ಪಟಾಕಿ ಖರೀದಿಗೆ ಹೋಗುವ ಲಕ್ಷಾಂತರ ಜನರ ಜೀವದ ಜೊತೆಗೆ ನವಲಗುಂದ ಪಟಾಕಿ ವ್ಯಾಪಾರಸ್ಥರು ಆಟವಾಗು ತ್ತಿದ್ದಾರೆ.
ನವಲಗದ ಪಟ್ಟಣದ ಹೊರವಲಯದ ಮೈದಾನ ದಲ್ಲಿ ಪಟಾಕಿ ಮಳಿಗೆಗಳನ್ನು ತೆರೆದಿರುವ ವ್ಯಾಪಾ ರಸ್ಥರು ಸರ್ಕಾರದ ಮತ್ತು ಅಗ್ನಿಶಾಮಕ ದಳದ ಎಲ್ಲ ಷರತ್ತುಗಳನ್ನು ಗಾಳಿಗೆ ತೂರಿ ವ್ಯವಹಾರ ನಡೆಸುತ್ತಿದ್ದಾರೆ.
ಕೋಟ್ಯಂತರ ರೂ. ಮೌಲ್ಯದ ಪಟಾಕಿಗಳನ್ನು ಇಲ್ಲಿ ದಾಸ್ತಾನಿಡಲಾಗಿದ್ದು ಸುರಕ್ಷತೆಯ ದೃಷ್ಟಿ ಯಿಂದ ಯಾವುದೇ ಮುಂಜಾಗೃತಾ ಕ್ರಮ ಕೈಗೊಂಡಿಲ್ಲ ಇದೊಂದು ದೊಡ್ಡ ದುರಂತದ ಮಾತಾಗಿದ್ದು ಕಂಡು ಬರುತ್ತದೆ.
ಪಟಾಕಿ ಮಳಿಗೆ ಹಾಕಲು ಪರವಾನಗಿ ನೀಡಿದ ಬಳಿಕ, ಸ್ಥಳಕ್ಕೆ ಬಂದು ಪರಿಶೀಲಿಸುವುದು ಸ್ಥಳೀಯ ಪೊಲೀಸರ ಮತ್ತು ಅಗ್ನಿಶಾಮಕ ದಳ ಇಲಾಖೆ ಅಧಿಕಾರಿಗಳ ಕರ್ತವ್ಯ. ಆದರೆ ಕಂಡು ಕಾಣದಂತೆ ಇರುವ ಅಧಿಕಾರಿಗಳಿಗೆ ವ್ಯಾಪಾರ ಸ್ಥರು ಪಟಾಕಿಗಳನ್ನು ಕಪ್ಪವಾಗಿ ಕೊಟ್ಟು ಕಳಿಸುತ್ತಿ ದ್ದಾರೆ.ಇದು ಇಲ್ಲಿ ಸರ್ವೆ ಸಾಮಾನ್ಯವಾಗಿ ಕಂಡು ಬರುತ್ತದೆ.
ಮುಂಜಾಗೃತಾ ಕ್ರಮವಾಗಿ ಅಗ್ನಿ ನಿಯಂತ್ರಸುವ ಸಲಕರಣೆ, ನೀರು ಮತ್ತು ಮರುಳನ್ನು ದಾಸ್ತಾನಿಡ ಬೇಕು. ಆದರೆ ಇಲ್ಲಿ ಅದ್ಯಾವುದನ್ನೂ ಪಾಲಿಸದ, ಪಟಾಕಿ ವ್ಯಾಪಾರಸ್ಥರು ಜನರ ಜೀವದ ಜೊತೆಗೆ ಚಲ್ಲಾಟ ಆಡುತ್ತಿದ್ದಾರೆ.ಇದು ಸ್ಥಳದಲ್ಲೇ ವಾಸ್ತವ ವಾಗಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿರುವ ಹಾಗೆ ಕಂಡು ಬರುತ್ತದೆ.
ಕೇವಲ ಜನರ ಜೀವದ ಜೊತೆ ಆಡವಾಡದೇ, GST ಬಿಲ್ ಹರಿಯದೇ ಚೀಟಿಯಲ್ಲಿ ಲೆಕ್ಕ ತೋರಿಸಿ ಸರ್ಕಾರದ ಕಣ್ಣಿಗೂ ಮಣ್ಣೆರೆಚಲಾ ಗುತ್ತಿದೆ.ಪೊಲೀಸ್ ಇಲಾಖೆ ಹಾಗೂ ಜಿಲ್ಲಾಧಿಕಾ ರಿಗಳು ಇತ್ತ ಗಮನಹರಿಸಿ ಸಾರ್ವಜನಿಕರ ಹಿತ ಕಾಪಾಡಬೇಕಿದೆ.