ಹುಬ್ಬಳ್ಳಿ
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪುಂಡ ಪೊರಕರಿಗಳ ಹಾವಳಿ ಹೆಚ್ಚಾಗಿದೆ. ನಗರದ ಹೆಗ್ಗೇರಿಯ ಮಾರುತಿ ಕಾಲೋನಿಯ ನಗರದಲ್ಲಿ ತಡರಾತ್ರಿ ಮಹಿಳೆಯರ ಮೇಲೆ ಹಲ್ಲೆ ಮದ್ಯ ಸೇವನೆ ಮಾಡಿ ಮಾರಕಾಸ್ತ್ರಗಳಿಂದ ಹೊಡೆದು ಪರಾರಿಯಾಗಿದ್ದಾರೆ. ರಾಕೇಶ, ಸಚಿನ್ ಹೆಬ್ಬಳ್ಳಿಯಿಂದ ಮಹಿಳೆಯರ ಜೊತೆಗೆ ಅನುಚಿತ ವರ್ತನೆ ಮಾಡಿ ನಂತರ ಪುಂಡಾಟಿಕೆ ಮಾಡಿದ್ದಾರಂತೆ.

ಅಲ್ಲದೇ ತೆಲೆ, ಭುಜಕ್ಕೆ ಹೊಡೆದ ಪುಂಡರು ರಕ್ತಸ್ರಾವದಿಂದ ಮಹಿಳೆಯರು ಬೀದಿಯಲ್ಲಿಯೇ ಬಿದ್ದರು ಅಕ್ಕಪಕ್ಕದಲ್ಲಿರುವ ಸ್ಥಳೀಯರು ಯಾರು ರಕ್ಷಣೆಗೆ ಬರಲಿಲ್ಲವಂತೆ. ಈ ಕುರಿತಂತೆ ಮೇಲಿಂದ ಮೇಲೆ ಇಂಥಹ ಉಪಟಳು ಹೆಚ್ಚಾಗಿದ್ದು ಇದರಿಂದ ಕಂಗಾಲಾದ ಮಹಿಳೆಯರು ಪೊಲೀಸರಿಗೆ ದೂರು ನೀಡಿದ ಪ್ರಯೋಜನವಿಲ್ಲವಾಗಿಲ್ಲವಂತೆ. ಹೀಗೆ ಹಲ್ಲೆಗೊಳಗಾದ ಮಹಿಳೆಯರು ಆರೋಪವನ್ನು ಮಾಡಿದ್ದಾರೆ.
ಇನ್ನೂ ಇದರಿಂದ ಪೊಲೀಸರ ಮೇಲೆ ಗರಂ ಆದ ಹಲ್ಲೆಗೊಳಾದ ಮಹಿಳೆಯರು ನಂತರ ಘಟನಾ ಸ್ಥಳಕ್ಕೆ ಹಳೇ ಹುಬ್ಬಳ್ಳಿಯ ಪೊಲೀಸರು ಆಗಮಿಸಿ ಪರಿಶೀಲನೆ ಮಾಡಿದ್ದಾರಂತೆ. ಸಧ್ಯ ಇದನ್ನು ಹಳೇ ಹುಬ್ಬಳ್ಳಿಯ ಇನಸ್ಪೇಕ್ಟರ್ ಶಿವಾನಂದ ಕಮತಗಿ ಮತ್ತು ಸಿಬ್ಬಂದಿಯವರು ಗಂಭೀರವಾಗಿ ತಗೆದುಕೊಂಡಿದ್ದು ಹಲ್ಲೆ ಮಾಡಿರುವ ಆರೋಪಿಗಳ ಬಂಧನಕ್ಕೇ ಮುಂದಾಗಿದ್ದು ತನಿಖೆ ಮಾಡತಾ ಇದ್ದಾರೆ.