ಉತ್ತರಪ್ರದೇಶ –
ದಿನ ಬೆಳಗಾದರೆ ಸಾಕು ವೆರೈಟಿ ವೆರೈಟಿ ಡ್ರೆಸ್ ಅದರಲ್ಲೂ ಜೀನ್ಸ್ ಬಂದ ಮೇಲಂತೂ ಹೆಚ್ಚಿನ ಪ್ರಮಾಣದಲ್ಲಿ ಇವುಗಳನ್ನು ಧರಿಸುವ ಯೂತ್ಸ್ ಗೆ ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ಶಾಕ್ ನೀಡಲಾಗಿದೆ.ಹೌದು ಯುವತಿಯರು ಜೀನ್ಸ್ ಮತ್ತು ಸ್ಕರ್ಟ್ ಧರಿಸುವುದನ್ನು ನಿಷೇಧಿಸಿರುವ ಉತ್ತರ ಪ್ರದೇಶದ ಮುಜಾಫರ್ ನಗರ ಜಿಲ್ಲೆಯ ವ್ಯಾಪ್ತಿಗೆ ಬರುವ ಗ್ರಾಮ ಪಂಚಾಯತ್.

ಯುವತಿಯರಿಗೆ ಜೀನ್ಸ್ ಹಾಗೂ ಸ್ಕರ್ಟ್ ಗಳನ್ನು ಈ ಒಂದು ಗ್ರಾಮದಲ್ಲಿ ನಿರ್ಬಂಧ ಹೇರಲಾಗಿದೆ ಈ ಪಂಚಾಯಿತಿ ವ್ಯಾಪ್ತಿಯಲ್ಲಿ. ಯುವಕರು ಹಾಫ್ ಪ್ಯಾಂಟ್ ಧರಿಸದಂತೆ ಕೂಡ ಸೂಚಿಸಿದೆ . ಅಷ್ಟೇ ಅಲ್ಲದೆ ಒಂದು ವೇಳೆ ಇದನ್ನು ಉಲ್ಲಂಘಿಸಿದವರಿಗೆ ಸಾಮಾಜಿಕ ಬಹಿಷ್ಕಾರ ಹಾಕುವುದಾಗಿ ಎಚ್ಚರಿಕೆ ನೀಡಿ ಆದೇಶವನ್ನು ಹೊರಡಿಸಲಾಗಿದೆ

ಮುಜಾಫರ್ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಪಿಪಾಲ್ಟಾ ಗ್ರಾಮ ಪಂಚಾಯತ್ ನಲ್ಲಿ ಇಂಥದೊಂದು ದೊಡ್ಡ ನಿರ್ಧಾರವನ್ನು ಸಭೆ ಮಾಡಿ ಈ ಒಂದು ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಇದರೊಂದಿಗೆ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ತಡೆಯುವುದಾಗಿ ಪಂಚಾಯತ್ ಘೋಷಿಸಿದೆ . ರೈತ ನಾಯಕ ಠಾಕೂರಿ ಪೂರಣ್ ಸಿಂಗ್ ನಿಷೇಧವನ್ನು ಸಮರ್ಥಿಸಿ, ಇದು ಉತ್ತಮ ನಿರ್ಧಾರ ಎಂದು ಪ್ರಶಂಸಿದ್ದು ಯಾವ ರೀತಿ ಜನರು ಇದಕ್ಕೆ ಸ್ಪಂದಿಸುತ್ತಾರೆ ಎಂಬುಕಾದು ನೋಡಬೇಕು