ಹುಬ್ಬಳ್ಳಿ ಧಾರವಾಡದಲ್ಲಿ ಪಿಕ್ ಪಾಕೇಟ್ ಮಾಡುತ್ತಿದ್ದ ಮಹಿಳಾ ಗ್ಯಾಂಗ್ ಬಂಧನ

Suddi Sante Desk

ಹುಬ್ಬಳ್ಳಿ ಧಾರವಾಡ –

ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಎಲ್ಲೆಂದರಲ್ಲಿ ಕಿಸೆಕಳ್ಳತನ ,ಬಸ್‍ಗಳಲ್ಲಿ ಬ್ಯಾಗ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಮಹಿಳಾ ಕಳ್ಳಿಯರ ಜಾಲವನ್ನು ಹುಬ್ಬಳ್ಳಿಯ ಶಹರ ಠಾಣೆ ಪೊಲೀಸರು ಭೇದಿಸಿದ್ದಾರೆ. ಈ ಕುರಿತು ಕಾರ್ಯಾಚರಣೆ ಮಾಡಿದ ಪೊಲೀಸರು ಐದು ಜನ ಮಹಿಳಾ ಕಳ್ಳಿಯರನ್ನು ಬಂಧನ ಮಾಡಿದ್ದಾರೆ.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಪೊಲೀಸ ಇನ್ಸ್ಪೆಕ್ಟರ್ ರಾದ ಆನಂದ ಎಮ್ ಒನಕುದ್ರೆ ಮತ್ತು ಮಹಿಳಾ PSI ಶ್ರೀಮತಿ ಪದ್ಮಮ್ಮ ಹಾಗೂ ತಂಡವು ಕಾರ್ಯಾಚರಣೆ ಮಾಡಿ ಕಳ್ಳತನ ಮಾಡುತ್ತಿದ್ದ ಮಹಿಳಾ ಗ್ಯಾಂಗ್ ಬಂಧನ ಮಾಡಿದ್ದಾರೆ.

ಶ್ರೀಮತಿ ಪಲ್ಲವಿ ಕೋಂ ಚಂದ್ರಶೇಖರ ಭಜಂತ್ರಿ @ ಕೊರವರ ವಯಾ: 27 ವರ್ಷ ಸಾ: ಹುಬ್ಬಳ್ಳಿ, ಶ್ರೀಮತಿ ಆಸ್ಮಾ ಕೋಂ ಮಹ್ಮದರಫೀಕ ಗದಗ ವಯಾ: 35 ವರ್ಷ ಸಾ; ಹುಬ್ಬಳ್ಳಿ, ಶ್ರೀಮತಿ ಕೊಳದವ್ವ@ಕೊಳಲಿ ತವರಗೊಪ್ಪ ವಯಾ: 27 ವರ್ಷ ಸಾ: ಹುಬ್ಬಳ್ಳಿ ,ಶ್ರೀಮತಿ ಯಲ್ಲಮ್ಮ ಕೋಂ ಬಸವರಾಜ ಕೊಟುಗಣಿಸಿ ವಯಾ: 30 ವರ್ಷ ಸಾ: ಹುಬ್ಬಳ್ಳಿ,ಶ್ರೀಮತಿ ಪ್ರೇಮಾ @ ಪಾರಿಜಾತ ಕೋಂ ಅಣ್ಣಪ್ಪ ಭಜಂತ್ರಿ ವಯಾ: 29 ವರ್ಷ ಸಾ: ಹುಬ್ಬಳ್ಳಿ ಬಂಧಿತರಾಗಿದ್ದಾರೆ.ಇವರಿಂದ ಹಳೆಯ ಗಲಸಿರಿ ಬಂಗಾರದ ಸರ ತೂಕ 20 ಗ್ರಾಂ ಅದರ ಕಿಮ್ಮತ್ತು 42,000/- ರೂ ,1 ಗ್ರಾಂ ತೂಕದ 16 ಬಂಗಾರದ ಗುಂಡುಗಳು ಅದರ ಕಿಮ್ಮತ್ತು 4,500/- ರೂ
3] ನಗದು ಹಣ 1,860 ರೂ.

ಜಪ್ತ ಮಾಡಿಕೊಂಡು ಕ್ರಮ ಜರುಗಿಸಿ ಆರೋಪಿ ತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿರುತ್ತಾರೆ. ಈ ಮೇಲ್ಕಂಡ ಆರೋಪಿತರನ್ನು ಪತ್ತೆ ಹಚ್ಚಿದ ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ ಆನಂದ ಎಮ್ ಒನಕುದ್ರೆ ಮತ್ತು ಮಹಿಳಾ ಪಿ.ಎಸ್.ಐ ಶ್ರೀಮತಿ ಪದ್ಮಮ್ಮ ಹಾಗೂ ತಂಡಕ್ಕೆ ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘನೆ ವ್ಯಕ್ತಪಡಿಸಿರುತ್ತಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.