ಧಾರವಾಡ –
ಸನ್ಮಾನ್ಯ ಗೌರವಯುತ ಮುಖ್ಯಮಂತ್ರಿಗಳು ಹಾಗೂ ಸನ್ಮಾನ್ಯ ಶಿಕ್ಷಣ ಸಚಿವರು ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಯಂದು ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರ ಹಾಗೂ ಮಾತೇ ಸಾವಿತ್ರಿಬಾಯಿ ಫುಲೆ ಅವರ ಎರಡು ಭಾವಚಿತ್ರ ಕ್ಕೆ ಪುಷಾರ್ಪಣೆ ಮಾಡಿ ಗೌರವ ಸಲ್ಲಿಸಿದರು ಇದಕ್ಕಾಗಿ ಸಮಸ್ತ ಕರ್ನಾಟಕದ ಮಹಿಳಾ ಶಿಕ್ಷಕಿಯರ ಪರವಾಗಿ ಧನ್ಯವಾದಗಳು ಎಂದು ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)ರಾಜ್ಯ ಘಟಕ ಧಾರವಾಡ ಸ0ಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ ಲತಾ ಎಸ್. ಮುಳ್ಳೂರ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಜ್ಯೋತಿ H ಹೇಳಿದ್ದಾರೆ.
ರಾಜ್ಯಾದ್ಯಂತ ಶಿಕ್ಷಕರ ದಿನಾಚರಣೆಯಂದು ರಾಜ್ಯ ಮಟ್ಟದ ಮೇಲಿನ ಕಾರ್ಯಕ್ರಮದ ರೀತಿಯಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರ ದೊಂದಿಗೆ ಮಾತೇ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರ ಇಡಬೇಕು ಅವರಿಗೂ ಗೌರವ ಸಮ ರ್ಪಣೆ ಆಗಬೇಕು ಪುರುಷ ಪ್ರಧಾನ ದೇಶದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ಮಾತೆಗೆ ಗೌರವ ಸಿಗಲೆಬೇಕು ಭಾರತ ಕಂಡ ಅಪರೂಪದ ಜ್ಞಾನದ ಜ್ಯೋತಿಗಳು ಎಂದಿದ್ದಾರೆ.
ನಿಜವಾಗಿ ಶಿಕ್ಷಣ ದಿನಾಚರಣೆಯ ಗೌರವ ಇವರಿಗೂ ಸಲ್ಲಬೇಕು.ಪ್ರತಿ ಶಾಲೆಯಲ್ಲಿ ಇವರಿಗೆ ಗೌರವ ಸಲ್ಲ ಬೇಕು ವಿದ್ಯಾ ದಿನಾಚರಣೆಯಾಗಿ ಆಚರಣೆಯಾಗ ಬೇಕು ಇದು ಎಲ್ಲರ ಅಭಿಪ್ರಾಯ ಹಾಗೂ ಅವರಿಗೆ ಸಲ್ಲಬೇಕಾದ ಗೌರವ ಸಲ್ಲಬೇಕು ಎಂಬುದು ನಮ್ಮ ಆಶಯ ಎಂದರು.
1848 ರಲ್ಲಿ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಶಾಲೆಗಳನ್ನು ತೆಗೆದು ಮಹಿಳೆಯರಿಗೆ ಅಸ್ಪೃಶ್ಯರು, ಶೋಷಿತರು,ಅಲ್ಪ ಸಂಖ್ಯಾತರು,ಹಿಂದುಳಿದ ವರ್ಗ ಗಳಿಗೂ & ಇತರರಿಗೂ ಶಿಕ್ಷಣವನ್ನು ನೀಡಿದರು ಮುಖ್ಯವಾಗಿ ಸಮಾಜ ನಾಲ್ಕು ಗೋಡೆಗಳ ಮಧ್ಯೆ ಮಹಿಳೆಯರು ಗೊಂಬೆಗಳಾಗಿ ವಾಸಿಸುವಂತೆ ಮಾಡಿತ್ತು,ಪ್ರತಿಯೊಬ್ಬ ಮಹಿಳೆಯ ರಿಗೂ ಶಾಲೆ ಗಳನ್ನು ತೆಗೆದು ಶಿಕ್ಷಣವನ್ನು ನೀಡಿದರು ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ಅವಶ್ಯಕ ಅದನ್ನು ನೀಡಲೆಬೇಕು ಎಂದು ಪಣ ತೊಟ್ಟು ಜೀವನವಿಡಿ ಬಹುಜನರಿಗಾಗಿ ಸಮರ್ಪಿಸಿದರು ಅವರು ಶಿಕ್ಷಣದ ಆಶೀರ್ವಾದ ಮಾಡಿರುವದ ರಿಂದ ಇಂದು ನಾವುಗಳು ಶಿಕ್ಷಣವಂತರಾಗಿ, ಜ್ಞಾನವಂತ ರಾಗಿ ,ಹಲವಾರು ಉದ್ಯೋಗಗಳನ್ನು ಪಡೆದು ಕೊಂಡು ನೆಮ್ಮದಿಯ ಜೀವನ ನೆಡೆಸಲು ಸಾಧ್ಯ ವಾಗಿದೆ.
ದೇಶದ ಭದ್ರ ಬುನಾದಿಯಾದ ಶಿಕ್ಷಕ ಬಂಧುಗಳು ಅವರ ಚಿಂತನೆಗಳನ್ನು ಸರ್ವಕಾಲಕೂ ನೆನೆದು ಭವಿಷ್ಯದಲ್ಲಿ ದೇಶವನ್ನು ಕಟ್ಟುವ ಮಕ್ಕಳಿಗೆ ತಿಳಿಸಬೇಕಾದ ಅಗತ್ಯತೆ ಇದೆ.ಇವರುಗಳ ಹೆಸರಿನಲ್ಲಿ ಉತ್ತಮ ಶಿಕ್ಷಕ/ಶಿಕ್ಷಕಿ ಪ್ರಶಸ್ತಿಗಳನ್ನು ರಾಜ್ಯ.ಜಿಲ್ಲಾ ತಾಲೂಕು ಹಂತದಲ್ಲಿ ನೀಡಿದರೆ ಅತ್ಯಂತ ಸೂಕ್ತ ವಾಗಿರುತ್ತದೆ.ನಮ್ಮೆಲ್ಲರಿಗೆ ಅಕ್ಷರಧಾತರು ಸತ್ಯ ಶೋಧಕ ಸಮಾಜದ ಸ್ಥಾಪಕರು ಮಹಾತ್ಮ ಜ್ಯೋತಿ ಬಾ ಫುಲೆ ದೇಶದಮೊದಲ ಶಿಕ್ಷಕಿ (Indian First Lady Teacher) ಮಾತೆ ಸಾವಿತ್ರಿ ಬಾಯಿ ಫುಲೆ
ಫುಲೆ ದಂಪತಿಗಳಿಗೆ ಕೋಟಿ ನಮನಗಳು ಎಂದರು