ಹುಬ್ಬಳ್ಳಿ –
ಮಾಹಾಮಾರಿಯ ಹಿನ್ನೆಲೆಯಲ್ಲಿ ವಿಕಲಚೇತನ ನೌಕರರಿಗೆ ಮನೆಯಿಂದಲೇ ಕೆಲಸ ಮಾಡುವ ಆದೇಶವು ಜುಲೈ ೫ ರಿಂದ ಜುಲೈ ೧೯ ರವರೆಗೆ ಮುಂದುವರೆಯಲಿದೆ ಎಂದು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ.
ಈ ವಿಷಯದ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕರೋನಾ ಮಹಾಮಾರಿಯ ಅನ್ವಯ ವಿಕಲಚೇತನ ನೌಕರರು ಮನೆಯಿಂದ ಕೆಲಸ ಮಾಡುವ ಸ್ಥಳಕ್ಕೆ ಹೋಗಲು ತೊಂದರೆಯಾಗ ಬಾರದು ದು ಎಂಬ ಉದ್ದೇಶದಿಂದ ಸರಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ ಅವರು ಆದೇಶ ಮಾಡಿದ್ದಾರೆ.ಈ ಹಿಂದೇ ಇದ್ದ ಮನೆಯಿಂದ ಲೇ ಕೆಲಸದ ಆದೇಶವು ಜುಲೈ ೩೦ ಕ್ಕೆ ಕೊನೆಯಾ ಗಿತ್ತು.ಆದರೆ ಪ್ರಸ್ತುತವಾಗಿ ಜುಲೈ ೫ ರಿಂದ ಮತ್ತೇ ವಿಕಲಚೇತನ ನೌಕರರು ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯವನ್ನು ಪಡೆಯಬಹುದು.
ವಿಶೇಷ ವಿಕಲಚೇತನ ನೌಕರರು ಎಂದರೆ ಶಿಕ್ಷಕರು ಸೇರಿದಂ ತೆ ಎಲ್ಲಾ ಇಲಾಖೆಯ ನೌಕರರಿಗೆ ಅನ್ವಯವಾ ಗುತ್ತದೆ. ಎಲ್ಲಾ ವಿಕಲಚೇತನ ನೌಕರರು ಇದರ ಸದುಪಯೋಗ ಪಡುಕೊಳ್ಳಬೇಕು. ವಿಕಲಚೇತನ ನೌಕರರಿಗೆ ಇರುವ ಸೌಲಭ್ಯ ನೀಡಲು ಅಧಿಕಾರಿಗಳು ನಿರಾಕರಿಸಿದರೆ ಅಂತ್ತಾ ಅಧಿಕಾರಿಗಳು ವಿರುದ್ದ ಸಂಘದ ವತಿಯಿಂದ ಪ್ರತಿಭಟನೆಯನ್ನು ಹಮ್ಮಿ ಕೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.