ಹುಬ್ಬಳ್ಳಿ –
ಹುಬ್ಬಳ್ಳಿಯ ಬಿಜೆಪಿ ಪಕ್ಷದ ಕಚೇರಿಯಲ್ಲಿ ನೀರಿನ ಟ್ಯಾಂಕ್ ಗೆ ಬಿದ್ದ ಶ್ವಾನವೊಂದರ ಜೀವವನ್ನು ಉಳಿಸಲಾಯಿತು ಹೌದು ದೇಶಪಾಂಡೆ ನಗರದ ಪಕ್ಷದ ಕಾರ್ಯಾಲಯದ ಕಂಪೌಂಡ ಒಳಗಿನ ನೀರಿನ ಟ್ಯಾಂಕ್ ನಲ್ಲಿ ಶ್ವಾನ(ನಾಯಿ) ವೊಂದು ಆಕಸ್ಮಿಕವಾಗಿ ಕಾಲುಜಾರಿ ಬಿದ್ದಿತ್ತು ಕೂಡಲೇ ಇದನ್ನು ನೋಡಿ ಕಾಪಾಡಲಾಯಿತು

ನೀರಿನ ಟ್ಯಾಂಕ್ ಗೆ ಬಿದ್ದ ಸ್ವಲ್ಪ ಸಮಯದ ನಂತರ ವಾರ್ಡ್ ನ ಪಾಲಿಕೆ ಸದಸ್ಯರಾದ ಶ್ರೀಮತಿ ಮೀನಾಕ್ಷಿ ವಂಟಮೂರಿ ಗಮನಕ್ಕೆ ಬಂದ ತಕ್ಷಣವೇ ಪಾಲಿಕೆಯ ಪೌರಕಾರ್ಮಿಕರಿಗೆ ತಿಳಿಸಿ ಅವರ ಸಹಾಯದಿಂದ ಶ್ವಾನ ವನ್ನು ರಕ್ಷಿಸಿ ಜೀವ ಉಳಿಸಲಾಯಿತು.

ಇದರೊಂದಿಗೆ ಪ್ರಾಣಿಯೊಂದರ ಜೀವವನ್ನು ಉಳಿಸಲಾ ಯಿತು ಸಂದರ್ಭದಲ್ಲಿ ಈರಪ್ಪ ಕಳ್ಳಿಮನಿ,ಗುರು ದೊಡ ಮನಿ,ರಜಾಕ ಸಂಕನೂರ,ಪೌರ ಕಾರ್ಮಿಕರಾದ ನಾಗೇಶ ಹಾಗೂ ಅವರ ಸಿಬ್ಬಂದಿಗಳ ಸಹಾಯದಿಂದ ಮೂಕ ಪ್ರಾಣಿ ಶ್ವಾನದ ಜೀವ ಉಳಿಸಲಾಯಿತು.
ಇನ್ನೂ ಶ್ವಾನದ ಪ್ರಾಣವನ್ನು ಕಾಪಾಡಿದ ಪೌರ ಕಾರ್ಮಿಕ ರಿಗೆ ಧನ್ಯವಾದ ತಿಳಿಸಲಾಯಿತು.