ರಾಂಚಿ –
ಐಎಎಸ್ ಅಧಿಕಾರಿಯೊಬ್ಬರು ಆಪ್ತರಿಬ್ಬರ ಬಳಿ ರಾಶಿ ರಾಶಿ ಹಣ ಪತ್ತೆಯಾದ ಘಟನೆ ಜಾರ್ಖಂಡ್ ನಲ್ಲಿ ಬೆಳಕಿಗೆ ಬಂದಿದೆ.ಐಎಎಸ್ ಅಧಿಕಾರಿ ಪೂಜಾ ಸಿಂಘಲ್ ಅವರ ಆಪ್ತರಿಬ್ಬರ ಮನೆಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಇಂದು 19 ಕೋಟಿ ರೂಪಾಯಿ ಹಣವನ್ನು ವಶಕ್ಕೆ ಪಡೆದು ಕೊಂಡಿದೆ.ನರೇಗಾ ಯೋಜನೆಯಡಿಯಲ್ಲಿನ ಭ್ರಷ್ಟಾಚಾರ ಆರೋಪ ಸಂಬಂಧ ಇಡಿ ಅಧಿಕಾರಿಗಳಿಂದ ನಡೆದ ಶೋಧ ಕಾರ್ಯಾಚರಣೆ ವೇಳೆ ಭಾರೀ ಹಣ ಪತ್ತೆಯಾಗಿದೆ.ನರೇಗಾ ನಿಧಿಯ 18 ಕೋಟಿ ರೂಪಾಯಿಗಳ ಭ್ರಷ್ಟಾಚಾರ ಮತ್ತು ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಜಾರ್ಖಂಡ್ ಮತ್ತು ಇತರ ನಾಲ್ಕು ರಾಜ್ಯಗಳಲ್ಲಿ ಇಡಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.ದಾಳಿಯ ವೇಳೆ ಒಟ್ಟು 19.31 ಕೋಟಿ ರೂಪಾಯಿಯನ್ನು ಜಾರ್ಖಂಡ್ ನಲ್ಲಿ ವಶಕ್ಕೆ ಪಡೆಯಲಾಗಿದ್ದು ಇದರಲ್ಲಿ 17 ಕೋಟಿ ಹಣ ಪೂಜಾ ಸಿಂಘಾಲ್ ಅವರ ಚಾರ್ಟರ್ಡ್ ಅಕೌಂಟೆಂಟ್ ಸುಮನ್ ಕುಮಾರ್ ಅವರ ಬಳಿ ದೊರೆತರೆ ಉಳಿದ 1.8 ಕೋಟಿ ರೂಪಾಯಿ ಮತ್ತೊಂದು ಸ್ಥಳದಲ್ಲಿ ಸಿಕ್ಕಿದೆ.
ಐಎಎಸ್ ಅಧಿಕಾರಿಯ ನಿವಾಸದಿಂದಲೂ ತಪಾಸಣೆ ವೇಳೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೂಲಗಳ ಪ್ರಕಾರ ಶುಕ್ರವಾರ ವಶಪಡಿಸಿಕೊಂಡ ಹಣ ವನ್ನು ಎಣಿಸಲು ಮೂರು ನೋಟು ಎಣಿಕೆ ಯಂತ್ರಗಳನ್ನು ಬಳಸಲಾಗಿದೆ. 2000, 500, 200 ಮತ್ತು 100 ರೂ. ಮುಖಬೆಲೆಯ ಬೃಹತ್ ನೋಟುಗಳು ಪತ್ತೆಯಾಗಿದ್ದು ಸಧ್ಯ ಇನ್ನೂ ಕೂಡಾ ಕಾರ್ಯಾಚರಣೆಯನ್ನು ಅಧಿಕಾರಿ ಗಳು ಮುಂದುವರೆಸಿದ್ದು ಈ ಕುರಿತಂತೆ ತನಿಖೆಯನ್ನು ಮಾಡಲಾಗುತ್ತಿದ್ದು ಹೆಚ್ಚಿನ ಮಾಹಿತಿಯನ್ನು ಕೂಡಾ ನಿರೀಕ್ಷೆ ಮಾಡಲಾಗುತ್ತಿದೆ.