ಬೆಂಗಳೂರು –
ಕೇಂದ್ರದ ಮಾದರಿ ವೇತನವನ್ನು ರಾಜ್ಯದಲ್ಲಿನ ರಾಜ್ಯ ಸರ್ಕಾರಿ ನೌಕರರಿಗೆ ಜಾರಿಗೊಳಿಸುವಂತೆ ಒತ್ತಾಯ ದಿನದಿಂದ ದಿನಕ್ಕೆ ಕೂಗು ಜೋರಾಗುತ್ತಿದ್ದು ಇದರ ನಡುವೆ ಈಗಾಗಲೇ ಈ ಕುರಿತು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರ ಮನವಿ ಮಾಡಿದ್ದು ಇವರ ಧ್ವನಿ ಯಾಗಿ ನಿಕಟ ಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯ ಸರ್ಕಾರಿ ನೌಕರರ ಪರವಾಗಿ ಧ್ವನಿ ಎತ್ತಿದ್ದಾರೆ.
ಹೌದು ರಾಜ್ಯ ಸರ್ಕಾರಿ ನೌಕರರ ಸಂಘಟನೆಯ ಮನವಿ ಮೇರೆಗೆ ಅಧಿಕಾರಿಗಳ ಸಮಿತಿ ರಚಿಸಿ ರಾಜ್ಯದ ಆಯ ವ್ಯಯದಲ್ಲಿ ಘೋಷಣೆ ಮಾಡಲು ನಿಕಟಪೂರ್ವ ಮುಖ್ಯ ಮಂತ್ರಿ ಗಳಾದ ಬಿ ಎಸ್ ಯಡಿಯೂರಪ್ಪ ಅವರು ಈಗ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ರವರಿಗೆ ಪತ್ರವನ್ನು ಬರೆದಿದ್ದಾರೆ
ಇದರೊಂದಿಗೆ ರಾಜ್ಯದ ಸರ್ಕಾರಿ ನೌಕರರ ಪರವಾಗಿ ಯಡಿಯೂರಪ್ಪ ಅವರು ಗಟ್ಟಿಯಾಗಿ ಧ್ವನಿ ಎತ್ತಿ ಪ್ರಮುಖ ಬೇಡಿಕೆ ಕುರಿತು ಬರುವ ನಾಳೆಯ ಬಜೆಟ್ ನಲ್ಲಿ ಘೋಷಣೆ ಮಾಡುವಂತೆ ಆಗ್ರಹ ವನ್ನು ಮಾಡಿದ್ದಾರೆ