ಧಾರವಾಡ –
ಯೊಗೀಶಗೌಡ ಕೊಲೆ ಪ್ರಕರಣದಲ್ಲಿ ಸಿಬಿಐ ನೊಟೀಸ್ ನೀಡಿದ ಹಿನ್ನಲೆಯಲ್ಲಿ ಮೂವರು ನ್ಯಾಯಾಲಯಕ್ಕೇ ಹಾಜರಾದರು.
ಧಾರವಾಡದಲ್ಲಿನ ಜಿಲ್ಲಾ 3ನೇ ಹೆಚ್ಚುವರಿ ನ್ಯಾಯಾಲಯಕ್ಕೇ ಮಾಜಿ ಸಚಿವ ವಿನಯ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ, ಚಂದ್ರಶೇಖರ ಇಂಡಿ, ಹಾಗೂ ಸೋಮಶೇಖರ ನ್ಯಾಮಗೌಡ ಮೂವರು ನ್ಯಾಯಾಲಯಕ್ಕೇ ಹಾಜರಾದರು. ಸಿಬಿಐ ವಿಶೇಷ ನ್ಯಾಯಾಲಯ ಈ ಮೂವರಿಗೆ ಸುಳ್ಳು ಪತ್ತೆ ಪರೀಕ್ಷೆ ಮಾಡಲು ಅನುಮತಿ ಕೇಳಿ ಸಿಬಿಐ ನೋಟಿಸ್ ನೀಡಿತ್ತು.ನೊಟೀಸ್ ನೀಡಿದ ಹಿನ್ನಲೆಯಲ್ಲಿ ಮೂವರು ಇಂದು ಧಾರವಾಡದಲ್ಲಿ ನ್ಯಾಯಾಲಯಕ್ಕೇ ಹಾಜರಾದರು.
ವಿನಯ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ, ಸೋದರ ಮಾವ ಚಂದ್ರಶೇಖರ ಇಂಡಿ , ವಿನಯ ಕುಲಕರ್ಣಿ ಸಚಿವರಾಗಿದ್ದ ಸಮಯದಲ್ಲಿ ಆಪ್ತ ಸಹಾಯಕರಾಗಿದ್ದ ಸೋಮು ನ್ಯಾಮಗೌಡ ಇವರಿಗೆ ಯೊಗೀಶಗೌಡ ಕೊಲೆ ಪ್ರಕರಣದಲ್ಲಿ ಸುಳ್ಳು ಪತ್ತೆ ಪರೀಕ್ಷೆ ಮಾಡಲು ಅವಶ್ಯಕವಿದ್ದು ಇದನ್ನು ಮಾಡಲು ಅನುಮತಿ ಕೊಡುವಂತೆ ನ್ಯಾಯಾಲಯಕ್ಕೇ ಸಿಬಿಐ ಅಧಿಕಾರಿಗಳು ಕೇಳಿದ್ದರು.ಹಾಗೇ ಮೂವರಿಗೆ ನೊಟೀಸ್ ನೀಡಿದ್ದರು.ಇದರಿಂದ ಮೂವರು ನ್ಯಾಯಾಲಯಕ್ಕೇ ಹಾಜರಾದರು. ನ್ಯಾಯಾಲಾಯಕ್ಕೇ ಬರುವ ಮುನ್ನ ಈ ಮೂವರಿಗೆ ಕೊವಿಡ್ ಪರೀಕ್ಷೆಯನ್ನು ಮಾಡಲಾಯಿತು. ನ್ಯಾಯಾಲಯದ ಆವರಣದಲ್ಲೇ ಮೂವರಿಗೆ ಕೊವಿಡ್ ಪರೀಕ್ಷೆ ಮಾಡಲಾಯಿತು. ವಿಚಾರಣೆ ಮಾಡಿದ ನ್ಯಾಯಾಲಯ ವಿಚಾರಣೆಯನ್ನು ಮಧ್ಯಾಹ್ನ ಮೂಂದೂಡಿತು.