ಬೆಂಗಳೂರು –
ಶಿಕ್ಷಕರ ವರ್ಗಾವಣೆ ವಿಚಾರ ದಿನದಿಂದ ದಿನಕ್ಕೆ ಕಂಗಟ್ಟಾಗುತ್ತಿದೆ.ಅಂದುಕೊಂಡಿದ್ದು ಒಂದು ಆಗುತ್ತಿ ರೊದು ಇನ್ನೊಂದು ಹೀಗಾಗಿ ದಿನಕ್ಕೊಂದು ಬೆಳವ ಣಿಗೆ ಆಗುತ್ತಿದ್ದು ವರ್ಗಾವಣೆ ಮಾತ್ರ ಆಗುತ್ತಿಲ್ಲ ವಿಳಂಬವಾಗುತ್ತಿದ್ದು ಹೀಗಾಗಿ ಈ ಕುರಿತು ಅಂತಿಮವಾಗಿ ಚರ್ಚೆ ಮಾಡಲು ಸೆಪ್ಟೆಂಬರ್ 17 ರಂದು ರಾಯಚೂರಿನಲ್ಲಿ ಮಹತ್ವದ ಭೇಟಿ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ರಾಯಚೂರು ತಾಲೂಕಾ ಶಿಕ್ಷಕ ಸ್ನೇಹಿತರೇ ವರ್ಗಾವಣೆ ವಿಚಾರ ಒನ್ ಟೈಮ್ ಸೆಟಲ್ ಮೆಂಟ್ ಗಾಗಿ ಈಗಾಗಲೇ ಮಾನ್ಯ ಷಡಾಕ್ಷರಿ ಅವರನ್ನ ವೆಬಿನಾರ್ ಗೆ ಜಾಯಿನ್ ಮಾಡಿಸಿ ಈಗಾಗಲೇ ಮಾತಾಡಿಸಲಾಗಿದೆ
ಅನೇಕರಿಗೆ ಅವರ ಮಾತಿನ ಮೇಲೆ ಭರವಸೆ ಕೂಡಾ ಬಂದಾಗಿದೆ.

ದಿನಕ್ಕೊಂದು ಬೆಳವಣಿಗೆ ಆಗುತ್ತಿರುವ ಹಿನ್ನಲೆಯಲ್ಲಿ ಈಗ ಸೆಪ್ಟೆಂಬರ್ 17 ಕ್ಕೆ ಇದೇ ರಾಯಚೂರು ನಲ್ಲಿ ಶಿಕ್ಷಣ ಸಚಿವರು ,ಉಸ್ತುವಾರಿ ಸಚಿವರು ಹಾಗೂ ಷಡಾಕ್ಷರಿ ಅವರು ಆಗಮಿಸಲಿದ್ದಾರೆ.ಹೀಗಾಗಿ ಇದು ಒಳ್ಳೆಯ ಅವಕಾಶ ದಯಮಾಡಿ ರಾಯಚೂರು ನಲ್ಲಿನ ಎಲ್ಲಾ ಶಿಕ್ಷಕರು ಮತ್ತು ಜೊತೆಗೆ ಜಿಲ್ಲೆಯಾ ದ್ಯಂತ ಇರುವ ಸ್ನೇಹಿತರನ್ನ ಬರಲು ತಿಳಿಸಿ.ಎಂದು ಶಿಕ್ಷಕ ರೊಬ್ಬರು ಕರೆ ನೀಡಿದ್ದಾರೆ.
ಸುಧೀರ್ಘ ವಾಗಿ ಈಗಾಗಲೇ ಚರ್ಚೆ ಆಗಿರುವ ವಿಷಯವನ್ನು ಹಂಚಿಕೊಂಡು ಮುಂದೆ ಏನು ಮಾಡಬಹುದು ಹೇಗೆ ಮಾಡಬಹುದು ಯಾರಿಗೆ ಎಷ್ಟು ಪ್ರಿಯಾರಿಟಿ ಆಧಾರದ ಮೇಲೆ ಒನ್ ಟೈಮ್ ಸೆಟಲ್ ಮೆಂಟ್ ಮಾಡಬಹುದು ಎಂಬ ಅನೇಕ ವಿಚಾರಗಳ ಚರ್ಚೆ ಮಾಡೋಣ ದಯಮಾಡಿ ಆಗಮಿಸಿ ಎಂದಿದ್ದಾರೆ.ಕೇವಲ ವ್ಯಾಟ್ಸಾಪ್ ನಲ್ಲಿ ಪ್ರಶ್ನೆ ಮಾಡುವುದು ಚರ್ಚಿಸುವುದಷ್ಟೇ ಅಲ್ಲ ನಮ್ಮೆಲ್ಲರ ಜವಾಬ್ದಾರಿ ನಾವು ಸೇರುವುದು ಜೊತೆಗಿ ದ್ದವರನ್ನು ಕರೆದು ತರುವುದು ಎಂದು ಶಿಕ್ಷಕ ಮಹಾಂತೇಶ ಬಿರಾದಾರ ಕರೆ ನೀಡಿದ್ದಾರೆ.
ಆಗಮಿಸಲು ಸ್ಥಳ ಸಮಯ.
ಸೆಪ್ಟೆಂಬರ್ 17
Time:- 10ಕ್ಕೆ ಕೃಷಿ ವಿ ವಿ ರಾಯಚೂರು
(ಶಾಲಾ ಧ್ವಜಾರೋಹಣ ಮುಗಿಸಿ ಬೇಗನೇ ಬನ್ನಿ)