ಮುಖ್ಯಶಿಕ್ಷಕಿ ವಿರುದ್ಧ ತನಿಖೆ ಆರಂಭ ಮಾಡಿದ BEO ತನಿಖೆಯ ಕಾರಣ ಕೇಳಿದರೆ ಶಾಕ್ ಆಗುತ್ತೆ…..

Suddi Sante Desk

ಧರ್ಮಪುರಿ –

75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಇಡೀ ದೇಶವೇ ಅತಿ ಸಡಗರದಿಂದ ಆಗಸ್ಟ್ 15 ರಂದು ಆಚರಿಸಿತು.ಕೇಂದ್ರ ಸರ್ಕಾರವೂ ಕೂಡ ಸ್ವತಂತ್ರ ಅಮೃತ ಮಹೋತ್ಸವವನ್ನು ಸ್ಮರಣೀಯಗೊಳಿಸಲು ಆಜಾದಿ ಕಾ ಅಮೃತ ಮಹೋತ್ಸವ ಅಭಿಯಾನದಡಿ ಹಲವು ಕಾರ್ಯಕ್ರಮಗಳನ್ನು ಹಮ್ಮಿ ಕೊಂಡು ಅವುಗಳನ್ನು ಯಶಸ್ವಿಯಾಗಿಸಿತ್ತು.ಆದರೆ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಸರ್ಕಾರಿ ಶಾಲೆ ಯೊಂದರಲ್ಲಿ ಅಹಿತಕರ ಘಟನೆಯೊಂದು ನಡೆದು ಹೋಗಿದೆ.ಹೌದು ಮಕ್ಕಳಿಗೆ ಸ್ವಾತಂತ್ರ್ಯದ ಬಗ್ಗೆ ಸಾರಿ ಹೇಳಬೇಕಾದ ಶಾಲೆಯ ಮುಖ್ಯ ಶಿಕ್ಷಕಿಯೇ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಧ್ವಜಾರೋಹಣ ಹಾಗೂ ಧ್ವಜವಂದನೆ ಸಲ್ಲಿಸಲು ನಿರಾಕರಿಸಿದ್ದಾರೆ ಎಂಬ ಆಘಾತ ಕಾರಿ ಸುದ್ದಿ ಹೊರಬಿದ್ದಿದೆ.

ನಾನೊಬ್ಬ ಕ್ರಿಶ್ಚಿಯನ್ ಆಗಿದ್ದು ನಮ್ಮ ಧಾರ್ಮಿಕ ನಂಬಿಕೆ ಯ ಪ್ರಕಾರ ಧ್ವಜವಂದನೆಯನ್ನು ಅನುಮತಿಸಲಾಗು ವುದಿಲ್ಲ ಎಂದು ಹೇಳುತ್ತಾ ಧ್ವಜಾರೋಹಣ ಮಾಡಿಲ್ಲ ಮುಖ್ಯಶಿಕ್ಷಕಿಯ ಈ ವರ್ತನೆ ಈಗ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದ್ದು ಮುಖ್ಯ ಶಿಕ್ಷಣಾಧಿಕಾರಿ ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.ಧರ್ಮಪುರಿ ಜಿಲ್ಲೆಯ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕಿ ತ್ರಿವರ್ಣ ಧ್ವಜಕ್ಕೆ ವಂದನೆ ಸಲ್ಲಿಸಲು ನಿರಾಕರಿ ಸಿದ್ದಾರೆ.ಜೊತೆಗೆ ಈ ನಡೆಯನ್ನು ಸಮರ್ಥಿಸಿಕೊಂಡಿರುವ ಮುಖ್ಯ ಶಿಕ್ಷಕಿ ನಾನೊಬ್ಬ ಕ್ರಿಶ್ಚಿಯನ್ ಆಗಿದ್ದು ನಮ್ಮ ಧಾರ್ಮಿಕ ನಂಬಿಕೆಯ ಪ್ರಕಾರ ಧ್ವಜವಂದನೆಯನ್ನು ಅನುಮತಿಸಲಾ ಗುವುದಿಲ್ಲ ಎಂದು ಹೇಳಿದ್ದು ಮುಖ್ಯ ಶಿಕ್ಷಕಿಯ ಈ ವರ್ತನೆ ಈಗ ಎಲ್ಲೆಡೆ ಆಕ್ರೋಶಕ್ಕೆ ಕಾರಣ ವಾಗಿದ್ದು ಶಿಕ್ಷಣಾಧಿಕಾರಿ ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ತಮಿಳ್ಸೆಲ್ವಿ ಈ ವರ್ಷ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಅವರನ್ನು ಗೌರವಿಸುವ ಸಲುವಾಗಿ ಆಗಸ್ಟ್ 15 ರ ಸ್ವತಂತ್ರ ದಿನದಂದು ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಲಾ ಗಿತ್ತು.ಇದರ ಅಂಗವಾಗಿ ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕಿ ಧ್ವಜರೋಹಣ ನೆರವೇರಿಸುವಂತೆ ಕೇಳಿಕೊಳ್ಳಲಾಗಿದೆ. ಆದರೆ ಇದಕ್ಕೆ ಮುಖ್ಯಶಿಕ್ಷಕಿ ನಿರಾಕರಿಸಿದ್ದರಿಂದ ಸಹಾಯಕ ಮುಖ್ಯೋಪಾಧ್ಯಾಯರೇ ತ್ರಿವರ್ಣ ಧ್ವಜ ಹಾರಿಸಿದ್ದಾರೆ ಇನ್ನೂ ಇದಕ್ಕೆ ಸಬೂಬು ನೀಡಿರುವ ಮುಖ್ಯಶಿಕ್ಷಕಿ ನನ್ನ ಧರ್ಮದಲ್ಲಿ ಧ್ವಜವಂದನೆಗೆ ಅವಕಾಶವಿಲ್ಲ ಎಂದು ವಾದಿಸಿದ್ದಾರೆ.

ಈ ಹಿಂದೆಯೂ ತಮಿಳ್ಸೆಲ್ವಿ ಅವರು ರಾಷ್ಟ್ರಧ್ವಜ ಹಾರಿ ಸಲು ಮತ್ತು ತ್ರಿವರ್ಣ ಧ್ವಜಕ್ಕೆ ವಂದನೆ ಸಲ್ಲಿಸಲು ನಿರಾಕ ರಿಸಿದ್ದರು.ಈ ಬಗ್ಗೆ ವಿಡಿಯೋ ಮುಖಾಂತರ ಸ್ಪಷ್ಟನೆ ನೀಡಿರುವ ತಮಿಳ್ಸೆಲ್ವಿ ತಾನು ಕ್ರಿಶ್ಚಿಯನ್ ಧರ್ಮದವಳಾ ಗಿದ್ದು ನಾನು ರಾಷ್ಟ್ರಧ್ವಜವನ್ನು ಹಾರಿಸದಿರುವುದಕ್ಕೆ ಅಥವಾ ಅದಕ್ಕೆ ನಮಸ್ಕರಿಸದಿದ್ದಕ್ಕಾಗಿ ನನಗೆ ಯಾವುದೇ ಪಶ್ಚಾತಾಪವಿಲ್ಲ ಎಂದಿದ್ದಾರೆ.ಜೊತೆಗೆ ನಾವು ದೇವರಿಗೆ ಮಾತ್ರ ನಮಸ್ಕರಿಸುತ್ತೇವೆ ಹೊರತು ಬೇರೆ ಯಾರಿಗೂ ಅಲ್ಲ.ನಾವು ಧ್ವಜವನ್ನು ಗೌರವಿಸುತ್ತೇವೆ ಆದರೆ ನಾವು ದೇವರಿಗೆ ಮಾತ್ರ ನಮಸ್ಕರಿಸುತ್ತೇವೆ ಎಂದು ವಾದಿಸಿದ್ದಾರೆ.

ವಿಡಿಯೊ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಧರ್ಮಪುರಿ ಮುಖ್ಯ ಶಿಕ್ಷಣಾಧಿಕಾರಿ(ಸಿಇಒ)ಅವರಿಗೆ ದೂರು ಸಲ್ಲಿಸಲಾ ಗಿದೆ.ದೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಸರ್ಕಾರಿ ಶಾಲೆಯೊಂದರಲ್ಲಿ ಧ್ವಜಾರೋಹಣ ಮಾಡಲು ಮುಖ್ಯ ಶಿಕ್ಷಕಿ ನಿರಾಕರಿಸಿರುವ ಘಟನೆ ಬೆಳಕಿಗೆ ಬಂದಿದೆ.ಈ ಹಿಂದೆಯೂ ಕೂಡ ಸ್ವಾತಂತ್ರ್ಯ ದಿನಾಚರಣೆ ವೇಳೆ ಮುಖ್ಯ ಶಿಕ್ಷಕಿ ರಜೆ ಹಾಕಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸ ಲಾಗಿದೆ.ಅಷ್ಟೇ ಅಲ್ಲದೆ ಕಳೆದ ಹಲವು ವರ್ಷಗಳಿಂದ ಅನಾರೋಗ್ಯದ ನೆಪದಲ್ಲಿ ಕಾರ್ಯಕ್ರಮಕ್ಕೆ ಮುಖ್ಯಶಿಕ್ಷಕಿ ಶಾಲೆಗೆ ಬಂದಿರಲಿಲ್ಲ ಎಂಬುದು ದೂರಿನಲ್ಲಿ ಉಲ್ಲೇಖ ವಾಗಿದೆ ಸಧ್ಯ ತನಿಖೆ ಮಾಡಲಾಗುತ್ತಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.