ಪಲವಲ (ಹರಿಯಾಣಾ) –
ದೇಶ ದ್ರೋಹದ ಆರೋಪದ ಮೇಲೆ ಪೊಲೀಸ್ ಪೇದೆ ಯೊಬ್ಬರನ್ನು ಬಂಧನ ಮಾಡಲಾಗಿದೆ. ಹೌದು ಸೈನ್ಯದಿಂದ ನಿವೃತ್ತನಾದ ನಂತರ ಪೊಲೀಸ್ ದಳದಲ್ಲಿ ಭರ್ತಿಯಾದ ಸುರೇಂದ್ರ ಎಂಬ ಪೊಲೀಸ್ ಪೇದೆಯನ್ನು ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸ ಲಾಗಿದೆ. ಆತ ಪಲವಲನಲ್ಲಿ ಜಿಲ್ಲಾ ಪೊಲೀಸ್ ಕಾರ್ಯಾಲಯದಲ್ಲಿ ನೇಮಕಗೊಂಡಿದ್ದ.ಆತನಿಂದ 2 ಸಂಚಾರವಾಣಿಗಳನ್ನು ವಶಪಡಿಸಿಕೊಳ್ಳಲಾಗಿದೆ. ವಾಟ್ಸ್‌ಅಪ್ ನ ಮಾಧ್ಯಮದಿಂದ ಪಾಕಿಸ್ತಾನ ಗೂಢಚರ ಸಂಸ್ಥೆ ಐ.ಎಸ್.ಐ.ಗೆ ಭಾರತೀಯ ಸೈನ್ಯದ ಗೌಪ್ಯ ಮಾಹಿತಿಯನ್ನು ರವಾನಿಸುತ್ತಿದ್ದನು.
2018 ರಲ್ಲಿ ಸೈನ್ಯದಿಂದ ನಿವೃತ್ತರಾದಾಗಿನಿಂದ ಆತ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ಮಾಡುತ್ತಾ ಭಾರತೀಯ ಸೈನ್ಯದ ಮಾಹಿತಿಯನ್ನು ರವಾನಿಸು ತ್ತಿದ್ದ. ಅದಕ್ಕಾಗಿ ಆತನಿಗೆ ಇಲ್ಲಿಯವರೆಗೆ 70 ಸಾವಿರ ರೂಪಾಯಿ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.
ಸುರೇಂದ್ರ ಫೇಸ್‌ಬುಕ್ ಕ್ ನ ಮೂಲಕ ಪಾಕಿಸ್ತಾ ನದ ಒರ್ವ ಯುವತಿಯ ಸಂಪರ್ಕದಲ್ಲಿದ್ದ. ಪೊಲೀಸರು ಸುರೇಂದ್ರನನ್ನು ಹೆಚ್ಚಿನ ಮಾಹಿತಿಗಾಗಿ ವಿಚಾರಣೆ ನಡೆಸುತ್ತಿದ್ದಾರೆಂದು ಇಂಡಿಯಾ ಟಿವಿ ವರದಿಯೊಂದನ್ನು ಮಾಡಿದ್ದು ಸಧ್ಯ ವಶಕ್ಕೆ ತೆಗೆದುಕೊಂಡಿದ್ದು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ