ಬೆಳಗಾವಿ –
ಮಹಿಳಾ ಉಪನ್ಯಾಸಕಿಯೊಬ್ಬರೊಂದಿಗೆ ಅನುಚಿತ ವಾಗಿ ವರ್ತಿಸಿದ ಹಿನ್ನಲೆಯಲ್ಲಿ ಉಪನ್ಯಾಸಕರೊಬ್ಬರಿಗೆ ಥಳಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.ಹೌದು ಇಲ್ಲಿನ ಸರ್ದಾರ ಪಿಯು ಕಾಲೇಜಿನಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಉಪನ್ಯಾಸಕನ ವಿರುದ್ಧ ಮಹಿಳಾ ಉಪನ್ಯಾಸಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮತ್ತೊಂದೆಡೆ ಕಾಲೇಜಿನ ಆವರಣದಲ್ಲಿಯೇ ಮಹಿಳಾ ಸಿಬ್ಬಂದಿ ಉಪನ್ಯಾಸಕನ ಬೆಂಡೆತ್ತಿದ್ದಾರೆ.
ಪಿಯು ಕಾಲೇಜಿನ ಇಂಗ್ಲೀಷ್ ವಿಭಾಗದ ಕಾಯಂ ಉಪ ನ್ಯಾಸಕ ಅಮೀತ ಬಸವಮೂರ್ತಿ ಪ್ರತಿ ನಿತ್ಯ ಕಾಲೇಜಿಗೆ ಮದ್ಯ ಸೇವನೆ ಮಾಡಿಕೊಂಡು ಬಂದು ಮಹಿಳಾ ಉಪ ನ್ಯಾಸಕಿ ಅವರೊಂದಿಗೆ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುವುದಲ್ಲದೆ ದೈಹಿಕ ವಾಗಿ ದೌರ್ಜನ್ಯ ಎಸಗುತ್ತಿದ್ದ.ಅಲ್ಲದೇ ಮಹಿಳಾ ಸಿಬ್ಬಂದಿ ಇರುವ ವಿಶ್ರಾಂತಿ ಕೊಠಡಿಗೆ ಬಂದು ಅಸಭ್ಯವಾಗಿ ವರ್ತನೆ ಮಾಡುತ್ತಿದ್ದ.ಈ ಕುರಿತು ಕಾಲೇಜಿನ ಮುಖ್ಯಸ್ಥರಿಗೆ ಮೇಲಿಂದ ಮೇಲೆ ದೂರು ಸಲ್ಲಿಸಿದರು ಪ್ರಯೋಜನ ವಾಗಿರಲಿಲ್ಲ ನಾವೆಲ್ಲಾ ಕೆಲಸ ಮಾಡುವ ಸ್ಥಳದಲ್ಲಿ ಮಹಿಳಾ ಸಿಬ್ಬಂದಿಗೆ ಸುರಕ್ಷತೆ ನೀಡಬೇಕು ಹಾಗೇ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಕೂಡಲೇ ಕ್ರಮ ವಹಿಸಬೇಕು.ಈ ಕುರಿತು ಮಹಿಳಾ ಪೊಲೀಸ್ ಠಾಣೆಗೆ ಮಹಿಳಾ ಉಪನ್ಯಾ ಸಕಿಯರು ದೂರು ನೀಡಿದ್ದು ಇತ್ತ ದೂರು ದಾಖಲು ಮಾಡಿ ಕೊಂಡಿರುವ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂ ಡಿದ್ದಾರೆ