ಧಾರವಾಡ –
ಯುವಕನೊರ್ವ ರೇಲ್ವೆಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿ ಕೊಂಡ ಘಟನೆ ಧಾರವಾಡದಲ್ಲಿ ನಡೆದಿದೆ.ಧಾರವಾಡದ ರೇಲ್ವೆ ನಿಲ್ದಾಣದಲ್ಲಿ ಈ ಒಂದು ಘಟನೆ ನಡೆದಿದ್ದು ಬೆಳಗಿನ ಜಾವ 4 ಗಂಟೆಯಿಂದ 6 ಗಂಟೆಯವರೆಗಿನ ಟ್ರೇನ್ ಗೆ ಬಿದ್ದು ಈ ಒಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದು ಇನ್ನೂ ಸುದ್ದಿ ತಿಳಿದ ರೇಲ್ವೆ ಪೊಲೀಸರು ಸ್ಥಳಕ್ಕೇ ಆಗಮಿಸಿ ಪರಿಶೀಲನೆ ಮಾಡಿದ್ದಾರೆ
ಮೃತ ಯುವಕನ ಶವವನ್ನು ರೇಲ್ವೆ ಪೊಲೀಸರು ಆಸ್ಪತ್ರೆಗೆ ಶಿಪ್ಟ್ ಮಾಡಿದ್ದು ಇನ್ನೂ ಇತ್ತ ವಿದ್ಯಾಗಿರಿ ಪೊಲೀಸರು ಕೂಡಾ ಸ್ಥಳಕ್ಕೇ ಆಗಮಿಸಿ ಪರಿಶೀಲನೆ ಮೃತನ ಕುರಿತಂತೆ ಮಾಹಿತಿಯನ್ನು ಕಲೆಹಾಕುತ್ತಿದ್ದು ಕೈ ಮೇಲೆ RVF ಎಂದು ಟ್ಯಾಟೋ ಹಾಕಿಸಿಕೊಂಡಿದ್ದು ಮಾಹಿತಿ ಗೊತ್ತಿದ್ದವರು ಕೂಡಲೇ ರೇಲ್ವೆ ಇಲ್ಲವೇ ವಿದ್ಯಾಗಿರಿ ಪೊಲೀಸರು ತಿಳಿಸುವಂತೆ ಹೇಳಿದ್ದಾರೆ.