ಧಾರವಾಡ –

ಕೋವಿಡ 19 ಲಸಿಕಾ ಅಭಿಯಾನದ ಕಾರಣ ಉಂಟಾಗಿರುವ ರಕ್ತದ ಕೂರತೆ ನೀಗಿಸುವ ಪ್ರಯುಕ್ತ ಧಾರವಾಡದಲ್ಲಿ ಗಣೇಶ ಯುವಕ ಮಂಡಳ ಹಾಗೂ ರಾಷ್ಟೋತ್ತಾನ ರಕ್ತ ನಿಧಿ ಸಹಯೋಗ ದೋಂದಿಗೆ ರಕ್ತ ದಾನ ಶಿಬಿರ ನಡೆಯಿತು.

ಶಿಬಿರವನ್ನು ಆಯೋಜಕರಾದ ವಿಠ್ಠಲ ವಸಂತ ರಾವ ಚವ್ಹಾಣ ಇದರ ನೇತ್ರತ್ವದಲ್ಲಿ ಜರುಗಿತು.ಇನ್ನೂ ಉದ್ಘಾಟಕರಾಗಿ ಜನಜಾಗೃತಿ ಅಧ್ಯಕ್ಷರಾದ ರಾದ ಬಸವರಾಜ ಕೊರವರ ಮತ್ತು ದೇವ ಭಕ್ತರು ಆಚಾರ್ಯ ಅಮೃತೇಶ ಜೋಶಿ ರಾಜು ಕಾಳೆ ಆಗಮಿಸಿ ಚಾಲನೆ ನೀಡಿದರು

ಕಾರ್ಯಕ್ರಮ ದಲ್ಲಿ ಗಣೇಶ ಯುವಕ ಮಂಡಳಿ ಯ ಸದ್ಯಸರಾದ ಸಂತೋಷ ಮೇಟಿ ಸತೀಶ ಕರಾಡೆ ಶಿವು ಹುಬ್ಬಳ್ಳಿ ಸುದಿರ ಗಳಗಿ ಸದಾನಂದ ಗಳಗಿ ರವಿ ಗಾಳಿ ಬಾಬು ಶಿಲಾರೆ ಹರಿಶ ಡೋಂಗ್ರೆ ಸಂತೋಷ ಗೂರುಜಿ ಮಹೇಶ ಚುಡಾಮಣಿ ಮುಂತಾದ ವರು ಭಾಗವಹಿಸಿ ರಕ್ತದಾಮ ಮಾಡಿದರು


ಅನೇಕ ಜನ ಯುವಕರು ಯುವತಿಯರು ರಕ್ತ ದಾನ ಮಾಡಿ ಮಾನವತೆಯ ಮೆರೆದರು ಕಾರ್ಯಕ್ರಮವು ಲಕ್ಷ್ಮೀ ನರಸಿಂಹ ಮಂದಿರ ಸೇವಾ ಸಮಿತಿ ಸಂಸ್ಥೆ ಮದಿಹಾಳ ಧಾರವಾಡ ಇಲ್ಲಿ ಜರುಗಿತು
