ಹುಬ್ಬಳ್ಳಿ –
ಹೌದು ಪ್ರಧಾನಿ ನರೇಂದ್ರ ಮೋದಿ ಅವರ ಪರಕಲ್ಪನೆಯ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಹುಬ್ಬಳ್ಳಿಯ ಗ್ಲಾಸ್ ಹೌಸ್ ಗೆ ಈಗ 10.06 ಕೋಟಿ ರೂಪಾಯಿ ಅನುದಾನವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು ಸಮಗ್ರ ಗ್ಲಾಸ್ ನಲ್ಲಿನ ಅಭಿವೃದ್ದಿಗಾಗಿ ವಿಶೇಷವಾಗಿ ಕೇಂದ್ರ ಸಚಿವ ಪ್ಹಹ್ಲಾದ್ ಜೋಶಿ ಅವರ ಪ್ರಯತ್ನದಿಂದಾಗಿ ಈ ಒಂದು ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು ನಾಳೆ ಈ ಒಂದು ಕಾಮಗಾರಿಗೆ ಚಾಲನೆಯನ್ನು ನೀಡಲಾಗುತ್ತಿದೆ.

ಇನ್ನೂ ಪ್ರಮುಖವಾಗಿ ಗ್ಲಾಸ್ ನಲ್ಲಿನ ಸಂಗೀತ ಕಾರಂಜಿ ಅಭಿವೃದ್ದಿ ಯೋಜನೆಗೆ 4.67 ಕೋಟಿ,ಫಜಲ್ ಪಾರ್ಕಿಂಗ್ ಯೋಜನೆಗೆ 4.59 ರೂಪಾಯಿ ಇದರೊಂದಿಗೆ ಗ್ಲಾಸ್ ನ ಅಭಿವೃದ್ದಿಗೆ 3.01 ಕೋಟಿ ರೂಪಾಯಿ,ಪುಟಾಣಿ ರೈಲು ಅಭಿವೃದ್ದಿಗೆ 4.2 ಕೋಟಿ, ಮತ್ತು ಗುಣಮಟ್ಟದ ಪ್ರಯೋ ಗಾಲಯಕ್ಕೆ 90 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ವಿಶೇಷವಾದ ಪ್ರಯತ್ನದಿಂದಾಗಿ ಈ ಒಂದು ಅನುದಾನವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು ಈ ಒಂದು ಅಭಿವೃದ್ದಿ ಕಾಮಗಾರಿಗೆ ನಾಳೆ ಚಾಲನೆ ಸಿಗಲಿದೆ. ಬೆಳಿಗ್ಗೆ 11 30 ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೇರಿದಂತೆ ಹಲವರು ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.