ಬೆಂಗಳೂರು –
7 ನೇ ವೇತನ ಆಯೋಗ ಕೇಂದ್ರ ಸರಕಾರಿ ನೌಕರರಿಗೆ ಡಿಎ ಶೇ. 4ರಷ್ಟು ಹೆಚ್ಚಳ ಸಾಧ್ಯತೆ ಹೌದು ದೇಶದಾದ್ಯಂತ ಇರುವ ಅನೇಕ ರಾಜ್ಯ ಗಳು ತಮ್ಮ ಸರಕಾರಿ ನೌಕರರಿಗೆ ಡಿಎ ಹೆಚ್ಚಿಸಿದ ನಂತರ ಕೇಂದ್ರ ಸರಕಾರವು ತನ್ನ ಉದ್ಯೋಗಿಗ ಳಿಗೆ ಡಿಎಯನ್ನು ಶೇಕಡಾ 4 ರಷ್ಟು ಹೆಚ್ಚಿಸುವ ನಿರೀಕ್ಷೆಯಿದೆ.
ಜೂನ್ 2023 ಕ್ಕೆ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ ಎಐಸಿಪಿಐ ಸೂಚ್ಯಂಕವನ್ನು ಬಿಡುಗಡೆ ಮಾಡಿದ ನಂತರ ಡಿಎ ಹೆಚ್ಚಳದ ಸಾಧ್ಯತೆಯು ಹೆಚ್ಚಾಗಿದೆ.
ಜೂನ್ 2023 ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ ಎಐಸಿಪಿಐ ಸೂಚ್ಯಂಕದ ಅಂಕಿ ಅಂಶ ಗಳನ್ನು ಕೇಂದ್ರವು ಬಿಡುಗಡೆ ಮಾಡಿದೆ ಮತ್ತು ಇದು ಸೂಚ್ಯಂಕದಲ್ಲಿ ದೊಡ್ಡ ಜಿಗಿತವನ್ನು ತೋರಿಸಿದೆ.
ಮೇ ತಿಂಗಳ ಸೂಚ್ಯಂಕ ಸಂಖ್ಯೆ 134.7 ಅಂಕ ಗಳಿಗೆ ಹೋಲಿಸಿದರೆ ಜೂನ್ ಸೂಚ್ಯಂಕವು 136.4 ಪಾಯಿಂಟ್‌ಗಳಿಗೆ ಏರಿತು. ಜೂನ್ 2023 ರಲ್ಲಿ ಒಟ್ಟು 1.7 ಅಂಕಗಳ ಹೆಚ್ಚಳವನ್ನು ದಾಖಲಿಸಲಾಗಿದೆ.
ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ ಎಐಸಿಪಿಐ ಸೂಚ್ಯಂಕವು ಸಾಮಾನ್ಯವಾಗಿ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳದ ಶೇಕಡಾ ವಾರು ಪ್ರಮಾಣವನ್ನು ನಿರ್ಧರಿಸುತ್ತದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..