ಬೆಳಗಾವಿ –
ಯಾರು ದೇವರನ್ನು ನೋಡಿದ್ದಾರೆ ಗೊತ್ತಿಲ್ಲ ಆದರೆ ಅಧುನಿಕ ಕಾಲದಲ್ಲಿ ವೈದ್ಯರಿಗೆ ವೈದ್ಯೋ ನಾರಾಯಣ ಹರಿ ಎನ್ನುವ ಈಗಿನ ಕಾಲದಲ್ಲಿ ಮತ್ತು ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ಎಷ್ಟು ಸ್ಥಾನಮಾನ ಮತ್ತು ಗೌರವ ಕೊಟ್ಟಿದ್ದೇವೆಯೋ ಇಂತಹದ್ದೆ ಸಮಯದಲ್ಲಿ ಒಬ್ಬ ಹೆಣ್ಣು ನರ್ಸ್ ಸಾರಾಯಿ ಕುಡಿದು ರೋಗಿಗಳಿಗೆ ಚಿಕಿತ್ಸೆ ನೀಡುವುದು ರಾಜಾರೋಷವಾಗಿ ಸಿಗರೇಟ್ ಸೇದಿ ಹೊಗೆ ಬಿಡುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಗೋಕಾಕ್ ತಾಲೂಕಿನ ಘಟಪ್ರಭಾ ಸಮೀಪದ ಶಿಂದಿಕುರಬೇಟದಲ್ಲಿ ಆರೋಗ್ಯ ಕ್ಷೇಮ ಕೇಂದ್ರದ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾರ್ವಜನಿಕರು ತಮ್ಮ ರೋಗಗಳನ್ನು ಗುಣಪಡಿಸಿಕೊಳ್ಳಲು ಹೋದರೆ ಅಲ್ಲಿಯ ಸಿಬ್ಬಂದಿ ನರ್ಸೊಬ್ಬಳು ಸಾರಾಯಿ ಕುಡಿದು ಸಿಗರೇಟ್ ಸೇದಿ ಕುಡಿದ ಅಮಲಿನಲ್ಲೇ ರೋಗಿಗಳ ಚಿಕಿತ್ಸೆ ಮಾಡುವುದರ ಜೊತೆಗೆ ಇಂಜೆಕ್ಷನ್ ಮಾಡಲು ಹಣ ಪಡೆಯುವ ದೃಶ್ಯಗಳು ರಾರಾಜಿಸುತ್ತಿವೆ
ಅದಲ್ಲದೆ ಬಂದ ರೋಗಿಗಳಿಗೆ ಏಕವಚನದಲ್ಲಿ ನೀನಗೇನಾಗಿದೆ ಎಂದು ಮಾತನಾಡಿಸುವದು ಅಗೌರವದಿಂದ ನೋಡುವದು ಇವಳ ಕೆಲಸವಾಗಿದೆ
ಸರಕಾರಿ ಕೆಲಸ ದೇವರ ಕೆಲಸ ಎಂದು ಮಾಡುವ ಸರ್ಕಾರಿ ನೌಕರರಿಗೆ ಇದೆಂತಾ ಕೆಲಸ ಅನ್ನುವಂತಾ ಗಿದೆ.ಶಿಂದಿಕುರಬೇಟ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಮಹಿಳೆ ಹಾಡುಹಗಲೇ ಸಾರಾಯಿ ಕುಡಿದು ಇಂಜೆಕ್ಷನ್ ಮಾಡುವುದು ಬೆಳಕಿಗೆ ಬಂದ ತಕ್ಷಣ ಸ್ಥಳಿಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಇನ್ನು ಮೇಲಾದರೂ ಜಿಲ್ಲಾ ಆರೋಗ್ಯ ಅಧಿಕಾರಿಗ ಳು ಇತ್ತ ಕಡೆ ಗಮನ ಹರಿಸಿ ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅನೈತಿಕ ಚಟುವಟಿಕೆಗಳ ಮೇಲೆ ಸೂಕ್ತವಾದ ಕ್ರಮವನ್ನು ತೆಗೆದುಕೊಳ್ಳುತ್ತಾರಾ ಅಂತ ಕಾಯ್ದು ನೋಡಬೇಕಾ ಗಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಡಿ ಗ್ರೂಪ್ ನ ಮಹಿಳಾ ಸಿಬ್ಬಂದಿ ಹಾಗೂ ಗುತ್ತಿಗೆ ಆಧಾರದ ಸ್ಟಾಫ್ ನರ್ಸ್ ಇಬ್ಬರು ಸೇರಿಕೊಂಡು, ಧೂಮಪಾನ ಹಾಗೂ ಮದ್ಯಪಾನ ಮಾಡಿರುವ ಘಟನೆಯು, ಪೋಟೋಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.ಶಿಂಧಿಕುರಬೇಟ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಡಿ ಗ್ರೂಪ್ ನ ಮಹಿಳಾ ಸಿಬ್ಬಂದಿಗಳಾದಂತ ಸಾರಿಕಾ ಮತ್ತು ಗುತ್ತಿಗೆ ಆಧಾರದ ಸ್ಟಾಫ್ ನರ್ಸ್ ಶೈಲಾ ಜೊತೆಗೂಡಿ, ಆಸ್ಪತ್ರೆಯಲ್ಲೇ ಎಣ್ಣೆ ಪಾರ್ಟಿ ಮಾಡಿದ್ದಾರೆ. ಇಂತಹ ಪೋಟೋ ಕಂಡ ಸಾರ್ವಜನಿಕರು, ಮಹಿಳಾ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.