ಚೆನ್ನೈ-
IPL 13ನೇ ಆವೃತ್ತಿಯ ಎರಡನೇಯ ಮ್ಯಾಚ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಇವೆರಡು ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಗೆಲುವು ಸಾಧಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಕೊಲ್ಕತ್ತಾ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು 187 ರನ್ ದಾಖಲಿಸಿತ್ತು.ಇನ್ನೂ 188 ರನ್‌ಗಳ ಗುರಿ ಬೆನ್ನು ಹತ್ತಿದ ಸನ್ ರೈಸರ್ಸ್ ಹೈದರಾಬಾದ್ ಗುರಿಮುಟ್ಟಲಾಗದೇ ಸೋಲೊಪ್ಪಿ ಕೊಂಡಿತು.

ಸನ್ ರೈಸರ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದು ಕೊಂಡು 177 ರನ್ ಗಳಿಸಲಷ್ಟೇ ಸಾಧ್ಯವಾಯಿತು ಕೊಲ್ಕತ್ತಾ 10 ರನ್‌ಗಳ ಗೆಲುವು ಸಾಧಿಸಿತು. ಕೊಲ್ಕ ತ್ತಾ ನೈಟ್ ರೈಡರ್ಸ್ ಪರ ನಿತಿಶ್ ರಾಣ 80 ರನ್ ಬಾರಿಸಿದ್ರೆ ತ್ರಿಪಾಠಿ 53, ಶುಬ್ಮನ್ ಗಿಲ್ 15, ರಸ್ಸೆಲ್ 5, ಕಾರ್ತಿಕ್ 22, ಶಕಿಬ್ 3, ಮೋರ್ಗನ್ 2 ರನ್ ಬಾರಿಸಿದ್ರು.ಇನ್ನೂ ಇತ್ತ ಸನ್ ರೈಸರ್ಸ್ ಹೈದರಾಬಾ ದ್ ಪರವಾಗಿ ಮನೀಷ್ ಪಾಂಡೆ 61, ಜಾನಿ 55 ಹೊಡೆದರು ಉಳಿದವರೆಲ್ಲರೂ ಅಷ್ಟೊಂದು ಉತ್ತಮ ರೀತಿಯಲ್ಲಿ ಆಡಲಿಲ್ಲ






















