ಕುಂದಗೋಳ –
ಗ್ರಾಮಕ್ಕೆ ಸಿಸಿಟಿವಿ ಹಾಕಿಸಿ ಹೊಸ ಇತಿಹಾಸ ಬರೆದ ಅಲ್ಲಾಪೂರ ಗ್ರಾಮ ಪಂಚಾಯತ – ರಾಜ್ಯದ ಗ್ರಾಮ ಪಂಚಾಯತ ಗಳಿಗೆ ಮಾದರಿ ಯಾದ್ರು ಗ್ರಾಮ ಪಂಚಾಯತ ಸದಸ್ಯ ಮಲ್ಲಿಕಾರ್ಜನು ರಡ್ಡೇರ ಹೌದು
ಸಾಮಾನ್ಯವಾಗಿ ಕೆಲವೊಂದಿಷ್ಟು ವಿಚಾರಗಳಲ್ಲಿ ಕೆಲವರು ಸಾಕಷ್ಟು ಸುದ್ದಿಯಾಗುತ್ತಾರೆ ಸುದ್ದಿ ಯಾಗುತ್ತಿರುತ್ತಾರೆ ಎನ್ನೊದಕ್ಕೆ ಇವರೇ ಸಾಕ್ಷಿ. ಎಸ್ ಮಲ್ಲಿಕಾರ್ಜುನ ರಡ್ಡೇರ ಕುಂದಗೋಳ ತಾಲ್ಲೂಕಿನ ಅಲ್ಲಾಪೂರ ಗ್ರಾಮ ಪಂಚಾಯತ ಸಾಮಾನ್ಯ ಸದಸ್ಯರು.
ಪತ್ರಕರ್ತರಾಗಿದ್ದ ಇವರು ಗ್ರಾಮಕ್ಕೆ ಏನಾದ ರೊಂದು ಕೊಡುಗೆ ಇರಲಿ ಏನಾದರೂ ಒಂದು ಅಭಿವೃದ್ದಿಯನ್ನು ಮಾಡಬೇಕು ಎಂದು ಕನಸನ್ನು ಕಟ್ಟಿಕೊಂಡು ಗ್ರಾಮ ಪಂಚಾಯತ ಸದಸ್ಯರಾ ಗಿದ್ದಾರೆ.ಸದಸ್ಯರಾದ ಮೇಲೆ ಗ್ರಾಮದಲ್ಲಿ ಸಾಕಷ್ಟು ಹೊಸ ಹೊಸ ಅಭಿವೃದ್ದಿ ಯೋಜನೆಗಳನ್ನು ಮಾಡಿ ಗಮನ ಸೆಳೆದಿರುವ ಇವರು ಈಗ ಮತ್ತೊಂದು ವಿಚಾರದ ಮೂಲಕ ಚರ್ಚೆಯಲ್ಲಿ ದ್ದಾರೆ
ಹೌದು ಈಗಾಗಲೇ ಗ್ರಾಮದಲ್ಲಿ ಏನೇಲ್ಲಾ ಅಭಿವೃದ್ದಿಗಳನ್ನು ಮಾಡಿರುವ ಇವರು ಈಗ ಗ್ರಾಮದಲ್ಲಿ ಸಿಸಿ ಟಿವಿ ಗಳನ್ನು ಹಾಕಿಸಿ ರಾಜ್ಯದ ಗ್ರಾಮ ಪಂಚಾಯತ್ ಗಳಿಗೆ ಮಾದರಿಯಾಗಿ ದ್ದಾರೆ.ಗ್ರಾಮ ಪಂಚಾಯತಿ ವತಿಯಿಂದ ಅಲ್ಲಾಪೂರ ಗ್ರಾಮದ ಎಸ್ ಸಿ ಕಾಲೋನಿಯಲ್ಲಿ ಶಾಲಾ ಆವರಣದಲ್ಲಿ ಮತ್ತು ಗ್ರಾಮದ ಬಸ್ ನಿಲ್ದಾಣದಲ್ಲಿ ಹೀಗೆ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದಾರೆ
60 ಸಾವಿರ ರೂಪಾಯಿ ವೆಚ್ಚದಲ್ಲಿ ಸಿಸಿ ಟಿವಿ ಗಳೊಂದಿಗೆ ಧ್ವನಿ ವರ್ಧಕ ವ್ಯವಸ್ಥೆಯನ್ನು ಕೂಡಾ ಮಲ್ಲಿಕಾರ್ಜುನ ರಡ್ಡೇರ ಮಾಡಿ ಗ್ರಾಮದ ಭದ್ರತೆಗೆ ಹೊಸದೊಂದು ವ್ಯವಸ್ಥೆಯನ್ನು ಮಾಡಿ ರಾಜ್ಯದ ಗಮನ ಸೆಳೆದಿದ್ದಾರೆ.ಇದರೊಂದಿಗೆ ಮಲ್ಲಿಕಾರ್ಜುನ ರಡ್ಡೇರ ಅವರು ಮಾದರಿಯಾಗಿ ಇತಿಹಾಸವನ್ನು ಬರೆದಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಕುಂದಗೋಳ…..