ಬೆಂಗಳೂರು –
ಶಿಕ್ಷಕರ ವರ್ಗಾವಣೆ ವಿಚಾರದಲ್ಲಿ ವಿಳಂಬವಾಗು ತ್ತಿರುವ ಕುರಿತು ಮತ್ತು ಈವರೆಗೆ ಬೇಸಿಗೆ ರಜೆ ಬಗ್ಗೆ ಸ್ಪಷ್ಟವಾಗಿ ಮಾಹಿತಿ ಸಿಗದ ಹಿನ್ನಲೆಯಲ್ಲಿ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ವು ಶಿಕ್ಷಕರಲ್ಲಿ ಧೈರ್ಯವನ್ನು ತುಂಬಿದೆ
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿರುವ ವರ್ಗಾವಣೆ ವಿಚಾರ ಕುರಿತಂತೆ ಈವರೆಗೆ ರಾಜ್ಯ ಸರ್ಕಾರವು ಸ್ಪಂದಿಸುತ್ತಿಲ್ಲ ಹಾಗೇ ಈವರೆಗೆ ಒಂದ ರಿಂದ ಒಂಬತ್ತನೆಯ ತರಗತಿ ಕುರಿತಂತೆ ಪರೀಕ್ಷೆ ಕೂಡಾ ಮಾಡಬೇಕಾ ಬೇಡ ಎಂಬ ಬಗ್ಗೆ ಅಂತಿಮ ವಾಗಿಲ್ಲ
ಹಾಗೇ ಬೇಸಿಗೆ ರಜೆಯ ಕುರಿತಂತೆಯೂ ಕೂಡಾ ಹೇಳುತ್ತಿಲ್ಲ ಅದರೊಂದಿಗೆ ಕೆಲ ಜಿಲ್ಲೆಗಳಿಗೆ ಬಿಸಿಲಿನ ತಾಪಮಾನದಿಂದ ಕೆಲಸದ ಸಮಯವನ್ನು ಬದಲಾ ವಣೆ ಮಾಡಿದ್ದು ಇನ್ನೂ ಈ ಒಂದು ವಿಚಾರದಲ್ಲೂ ಕೂಡಾ ತಾರತಮ್ಯವಾಗಿದೆ ಹೀಗಾಗಿ ಇವೆಲ್ಲದರ ನಡುವೆ ನಮ್ಮ ಶಿಕ್ಷಕರ ಸಾಕಷ್ಟು ಗೊಂದಲಕ್ಕಿಡಾಗಿ ದ್ದಾರೆ.ಹೀಗಾಗಿ ಶಿಕ್ಷಕರು ಯಾವುದೇ ರೀತಿಯಲ್ಲೂ ಗೊಂದಲಕ್ಕಿಡಾಗಬಾರದು ಈ ಒಂದು ವಿಚಾರದಲ್ಲಿ ನಾವು ಸರ್ಕಾರದೊಂದಿಗೆ ಯಾವುದೇ ರೀತಿಯ ತಾರತಮ್ಯವನ್ನು ಮಾಡುತ್ತಿಲ್ಲ ಹಾಗೇ ನಿಮ್ಮೊಂದಿಗೆ ಕೂಡಾ ಅಲ್ಲ ನಿಮ್ಮೊಂದಿಗೆ ನಾವುಗಳಿದ್ದು ಯಾವುದ ಕ್ಕೂ ಭಯಪಡಬೇಡಿ ಅತಂಕಕ್ಕೊಳಗಾಗಬೇಡಿ ಎಂದು ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ, ಎಲ್ ಐ ಲಕ್ಕಮ್ಮನವರ, ಉಪ್ಪಿನ, ತಿಗಡಿ ಮತ್ತು ಸರ್ವ ಸದಸ್ಯರೂ ಶಿಕ್ಷಕರಲ್ಲಿ ವಿನಂತಿ ಮಾಡಿಕೊಂ ಡು ದೈರ್ಯವನ್ನು ತುಂಬಿದ್ದಾರೆ