ಹಿಜಾಬ್ ಗಾಗಿ ಪರೀಕ್ಷೆ ಬಹಿಷ್ಕರಿಸಿದ ವಿದ್ಯಾರ್ಥಿ ಗಳು ಭವಿಷ್ಯಕ್ಕಿಂತ ಹಿಜಾಬ್ ಹೆಚ್ಚಾಯಿತಾ ಹೀಗ್ಯಾಕೆ…..

Suddi Sante Desk

ಯಾದಗಿರಿ –

ಉಡುಪಿನ ವಿಚಾರಕ್ಕೆ ಉಡುಪಿಯಲ್ಲಿ ತಕರಾರು ತೆಗೆದಿದ್ದ ಆರು ವಿದ್ಯಾರ್ಥಿನಿಯರ ಸಾಲಿಗೆ ಮತ್ತೆ ಆರು ವಿದ್ಯಾರ್ಥಿನಿ ಯರು ಸೇರಿಕೊಂಡಿದ್ದಾರೆ.ಹೌದು ರಾಜ್ಯದ ಇನ್ನೊಂದು ಕಡೆಯಲ್ಲೂ ಆರು ವಿದ್ಯಾರ್ಥಿನಿಯರು ಹಿಜಾಬ್ ಗಾಗಿ ಪಿಯುಸಿ ಪರೀಕ್ಷೆಯನ್ನೇ ಬಹಿಷ್ಕರಿಸಿದ್ದಾರೆ.ತರಗತಿಯಲ್ಲಿ ಹಿಜಾಬ್ ಧರಿಸಿ ಕುಳಿತುಕೊಳ್ಳಲು ಅವಕಾಶ ಬೇಕು ಎಂದು ಆಗ್ರಹಿಸಿ ಉಡುಪಿಯಲ್ಲಿ ಆರು ವಿದ್ಯಾರ್ಥಿನಿಯರು ಪ್ರತಿಭ ಟಿಸಿದ ದಾರಿಯಲ್ಲೇ ಈ ಆರು ವಿದ್ಯಾರ್ಥಿನಿಯರು ಸಾಗಿದ್ದಾರೆ ಇವರು ಪಿಯುಸಿ ಪರೀಕ್ಷೆಗೂ ಹಿಜಾಬ್ ಧರಿಸಿ ಹಾಜರಾಗಲು ಅವಕಾಶ ನೀಡಬೇಕು ಎಂದು ಕೇಳಿದ್ದಾರೆ.

ಯಾದಗಿರಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಪಿಯುಸಿ ಕಲಾ ವಿಭಾಗದ ಈ ವಿದ್ಯಾರ್ಥಿನಿಯರು ಇಂದು ಅರ್ಥಶಾಸ್ತ್ರದ ಪರೀಕ್ಷೆ ಬರೆಯಬೇಕಿತ್ತು ಆದರೆ ಹಿಜಾಬ್ ಧರಿಸಿ ಪರೀಕ್ಷೆಗೆ ಹಾಜರಾಗಲು ಮೇಲ್ವಿಚಾರಕರು ಅವಕಾಶ ನೀಡದ್ದಕ್ಕೆ ಈ ಆರು ವಿದ್ಯಾರ್ಥಿನಿಯರು ಪರೀಕ್ಷೆ ಬರೆ ಯದೇ ವಾಪಸ್ ಆಗಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.