ನಮ್ಮಭಿಮಾನದ ಅಭಿನಂದನಾ ಕಾರ್ಯಕ್ರಮ ಕುರಿತು ರಾಜ್ಯಾಧ್ಯಕ್ಷ ಷಡಾಕ್ಷರಿ ಅವರಿಂದ ಮಾಹಿತಿ….. ಸಿದ್ದಗೊಂಡ ವೇದಿಕೆ – ಕಾರ್ಯಕ್ರಮದಲ್ಲಿ ಏನೇನು ಇದೆ…..ನೌಕರರ ಬೇಡಿಕೆಗಳ ಕುರಿತು ಮುಖ್ಯಮಂತ್ರಿ,ಉಪ ಮುಖ್ಯಮಂತ್ರಿ ಗೆ ಸಲ್ಲಿಕೆ ಆಗಲಿದೆ ಮನವಿ…..

Suddi Sante Desk
ನಮ್ಮಭಿಮಾನದ ಅಭಿನಂದನಾ ಕಾರ್ಯಕ್ರಮ ಕುರಿತು ರಾಜ್ಯಾಧ್ಯಕ್ಷ ಷಡಾಕ್ಷರಿ ಅವರಿಂದ ಮಾಹಿತಿ….. ಸಿದ್ದಗೊಂಡ ವೇದಿಕೆ – ಕಾರ್ಯಕ್ರಮದಲ್ಲಿ ಏನೇನು ಇದೆ…..ನೌಕರರ ಬೇಡಿಕೆಗಳ ಕುರಿತು ಮುಖ್ಯಮಂತ್ರಿ,ಉಪ ಮುಖ್ಯಮಂತ್ರಿ ಗೆ ಸಲ್ಲಿಕೆ ಆಗಲಿದೆ ಮನವಿ…..

ಬೆಂಗಳೂರು

ಬೆಂಗಳೂರಲ್ಲಿ ಸಿಎಂ-ಡಿಸಿಎಂಗೆ  ರಾಜ್ಯ ಸರ್ಕಾರಿ ನೌಕರರಿಂದ  ‘ನಮ್ಮಭಿಮಾನದ ಅಭಿನಂದನೆ’ ಕಾರ್ಯಕ್ರಮ ನಡೆಯಲಿದ್ದು OPS ಸೇರಿದಂತೆ ಹಲವು ಬೇಡಿಕಗಳ ಈಡೇರಿಕೆಗೆ ಸರ್ಕಾರಿ ನೌಕರರಿಂದ ಮನವಿ ಸಲ್ಲಿಕೆಯಾಗಲಿದೆ ಹೌದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಜುಲೈ 11 ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರಿಗೆ ‘ನಮ್ಮಭಿಮಾ ನದ ಅಭಿನಂದನೆ’ ಸಲ್ಲಿಸುವ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಇದೇ ವೇಳೆ ಸರ್ಕಾರಿ ನೌಕರರ ಮಕ್ಕಳಿ ಗಾಗಿ ‘ಪ್ರತಿಭಾ ಪುರಸ್ಕಾರ’ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದ ‘ತ್ರಿಪುರ ವಾಸಿನಿ’ಯಲ್ಲಿ ಕಾರ್ಯಕ್ರಮ ಜರುಗಲಿದ್ದು ಇಬ್ಬರೂ ಗಣ್ಯರನ್ನು ಸನ್ಮಾನಿಸಲಾಗುವುದು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾ ನಂದನಾಥ ಸ್ವಾಮೀಜಿ ಹಾಗೂ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಅಲ್ಲದೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಉಪಸ್ಥಿತರಿರಲಿದ್ದು, ಸುಮಾರು 25 ಸಾವಿರಕ್ಕೂ ಅಧಿಕ ನೌಕರರು ಭಾಗವಹಿಸುವ ನಿರೀಕ್ಷೆಯಿದೆ ಎಂದರು

3,000 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆ ಗಳಲ್ಲಿ ಶೇ. 90 ಕ್ಕಿಂತ ಹೆಚ್ಚು ಅಂಕ ಗಳಿಸಿರುವ ನೌಕರರ ಮಕ್ಕಳಿಗೆ ಈ ವೇಳೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ರಾಜ್ಯಾದ್ಯಂತ ಒಟ್ಟು 11 ಸಾವಿರ ವಿದ್ಯಾರ್ಥಿಗಳು ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, ಸಮಾರಂಭದಲ್ಲಿ ಸಾಂಕೇತಿಕವಾಗಿ ಸುಮಾರು 3,000 ವಿದ್ಯಾರ್ಥಿಗಳಿಗೆ ತಲಾ 2 ಸಾವಿರ ರೂ. ನಗದು ಬಹುಮಾನ ಬ್ಯಾಗ್ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾ ಗುವುದು ಎಂದು ಷಡಾಕ್ಷರಿ ವಿವರಿಸಿದರು ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಬಸವರಾಜು,ಮೋಹನ್ ಕುಮಾರ್ ಮತ್ತು ಸೋಮಶೇಖರ್ ಉಪಸ್ಥಿತರಿದ್ದರು.

ಹಳೆ ಪಿಂಚಣಿ ಯೋಜನೆ ಮರುಜಾರಿಗೆ ಒತ್ತಾಯ

ಇದೇ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘವು ತನ್ನ ಪ್ರಮುಖ ಬೇಡಿಕೆಗಳ ಹಕ್ಕೊತ್ತಾಯವನ್ನು ಸರ್ಕಾರದ ಮುಂದಿಡಲು ನಿರ್ಧರಿಸಿದೆ. ಎನ್‌ಪಿಎಸ್ ಸಮಿತಿಯಿಂದ ವರದಿ ಪಡೆದುಕೊಂಡು ನೂತನ ಪಿಂಚಣಿ ಯೋಜನೆಯನ್ನು ರದ್ದು ಪಡಿಸಿ, ಹಳೆ ಪಿಂಚಣಿ ಯೋಜನೆಯನ್ನು (OPS) ತಕ್ಷಣವೇ ಮರುಜಾರಿಗೊಳಿಸಬೇಕು ಎಂದು ಸಂಘವು ಆಗ್ರಹಿಸಿದೆ. ಇದರೊಂದಿಗೆ ಕೇಂದ್ರ ಸರ್ಕಾರಿ ನೌಕರರ ಮಾದರಿಯಲ್ಲೇ ರಾಜ್ಯ ಸರ್ಕಾರಿ ನೌಕರರಿಗೂ ವೇತನ ಹಾಗೂ ಭತ್ಯೆಗಳನ್ನು ನೀಡಬೇಕು ಎಂದು ಒತ್ತಾಯಿಸಲಾಗಿದೆ.

ನೌಕರರ ಸಂಘದ ಇತರ ಪ್ರಮುಖ ಬೇಡಿಕೆಗಳು

ಒತ್ತಡ ನಿವಾರಣೆ ಎಸ್‌ಐಆರ್ (SIR) ಸಮೀಕ್ಷೆಗೆ ಸಂಬಂಧಿ ಸಿದಂತೆ ನೌಕರರ ಮೇಲಿರುವ ಅನಗತ್ಯ ಕೆಲಸದ ಒತ್ತಡವನ್ನು ತಗ್ಗಿಸಬೇಕು ಮತ್ತು ಕಾರ್ಯದ ಗಡುವನ್ನು ವಾಸ್ತವ ಸ್ಥಿತಿಗೆ ಅನುಗುಣವಾಗಿ ನಿಗದಿಪಡಿಸಬೇಕು ಭದ್ರತೆ ಹಾಗೂ ರಕ್ಷಣೆ ಕರ್ತವ್ಯದ ವೇಳೆ ಒತ್ತಡದಿಂದಾಗಿ ಈಗಾಗಲೇ ಮಹಿಳಾ ನೌಕರರೊಬ್ಬರು ಅಪಘಾತದಲ್ಲಿ ಹಾಗೂ ಪುರುಷ ನೌಕರ ರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು.

ಕೆಲಸದ ಅವಧಿಯಲ್ಲಿ ಅನಧಿಕೃತ ವ್ಯಕ್ತಿಗಳು ಅಥವಾ ಸಂಘಟನೆ ಗಳು ಹಸ್ತಕ್ಷೇಪ ಮಾಡದಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡ ಬೇಕು ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.ರಾತ್ರಿ ಸಭೆಗಳಿಗೆ ನಿಷೇಧ ಬಿಎಲ್‌ಒ (BLO)ಗಳ ಸಭೆ ಹಾಗೂ ಪರಿಶೀಲನಾ ಕಾರ್ಯಕ್ರಮಗಳನ್ನು ರಾತ್ರಿ ವೇಳೆ ನಡೆಸಬಾರದು. ಕಚೇರಿ ವೇಳೆಯಲ್ಲೇ ಇವುಗಳನ್ನು ಆಯೋಜಿಸಬೇಕು ಹಾಗೂ ಮಹಿಳಾ ಸಿಬ್ಬಂದಿಯ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಎಂಬುದಾಗಿದೆ.

 

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.