Bus Stand ಗಳಿಲ್ಲದ ಹುಬ್ಬಳ್ಳಿ ಧಾರವಾಡ – ಅವಳಿ ನಗರದ ಮಧ್ಯದಲ್ಲಿನ ಸಾರ್ವಜನಿಕರ ಪರದಾಟ ಹೇಗಿದೆ ನೋಡಿ…

Suddi Sante Desk
Bus Stand ಗಳಿಲ್ಲದ ಹುಬ್ಬಳ್ಳಿ ಧಾರವಾಡ – ಅವಳಿ ನಗರದ ಮಧ್ಯದಲ್ಲಿನ ಸಾರ್ವಜನಿಕರ ಪರದಾಟ ಹೇಗಿದೆ ನೋಡಿ…

ಹುಬ್ಬಳ್ಳಿ ಧಾರವಾಡ

ಸ್ಮಾರ್ಟ್ ಸಿಟಿ ವಾಣಿಜ್ಯ ನಗರಿ ಉತ್ತರ ಕರ್ನಾಟಕದ ಹೆಬ್ಬಾಗಿಲು ಹೀಗೆ ಹತ್ತಾರು ಹೆಸರುಗಳಿಂದ ಕರೆಯಿಸಿಕೊಳ್ಳುವ ಹುಬ್ಬಳ್ಳಿ ಇತ್ತ ಸಾಹಿತಿಗಳ ನಗರಿ ವಿದ್ಯಾಕಾಶಿ ಎಂದು ಕರೆಯಿಸಿಕೊಳ್ಳುವ ಧಾರವಾಡ ಈ ಎರಡು ಅವಳಿ ನಗರಗಳು ಅಕ್ಕ ಪಕ್ಕದಲ್ಲಿ ಇವೆ ಹುಬ್ಬಳ್ಳಿ ಧಾರವಾಡ ಮಧ್ಯೆ ಚಿಗರಿ ಬಸ್ ನಿಲ್ದಾಣ ಗಳನ್ನು ಬಿಟ್ಟರೆ ರಸ್ತೆಯಲ್ಲಿ ಬಸ್ ನಿಲ್ದಾಣ ಇಲ್ಲದಿರುವುದು ಕಂಡು ಬರುತ್ತದೆ

ಎಷ್ಟೋ ಯೋಜನೆ ಗಳು ಬಂದರು ಕೋಟಿ ಕೋಟಿ ಅನುದಾನ ಬಂದರು ಕೂಡಾ ಅವಳಿ ನಗರದ ಮಧ್ಯ ಇರುವ ಹಲವು ನಿಲ್ದಾಣ ಗಳಲ್ಲಿ ಬಸ್ ನಿಲ್ದಾಣ ಇಲ್ಲದಿರುವುದು ಇಲ್ಲಿನ ವ್ಯವಸ್ಥೆಗೆ ಹಿಡಿದ ಕೈ ಕನ್ನಡಿ ಯಾಗಿದೆ

ಬಸ್ ಸ್ಟಾಪ್‌ಗೆ ಸಾರ್ವಜನಿಕರ ಪರದಾಟ ಮಳೆ ಬಂದರು ರಸ್ತೆಯಲ್ಲಿ ಬಿಸಿಲು ಬಂದರು ರಸ್ತೆಯಲ್ಲಿ ಪ್ರಯಾಣಿಕರ ಗೋಳು ಕೇಳುವವರು ಯಾರು ಎಂಬ ಪ್ರಶ್ನೆ ಇಲ್ಲಿನ ವ್ಯವಸ್ಥೆ ನೋಡಿದರೆ ಕಂಡು ಬರುತ್ತದೆ ಸಿಗ್ನಲ್‌ನಲ್ಲೇ ನಿಲ್ಲುವ ಬಸ್ಸುಗಳು ತಲೆಯ ಮೇಲೊಂದು ಸೂರಿಲ್ಲ ಎಚ್‌ಡಿಎಂಸಿ ಹಾಗೂ ಬಿಆರ್‌ಟಿಎಸ್ ನಿರ್ಲಕ್ಷ್ಯಕ್ಕೆ ಪ್ರಯಾಣಿಕರ ಆಕ್ರೋಶ

ಸ್ಮಾರ್ಟ್ ಸಿಟಿಯ ಕರಾಳ ಮುಖ ಅನಾವರಣವಾಗುತ್ತಿದೆ
ಪ್ರಯಾಣಿಕರಿಗೆ ಇಲ್ಲೊಂದು ‘ಬಸ್ ಶೆಲ್ಟರ್’ ಭಾಗ್ಯವಿಲ್ಲ, ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಿದೆಯೇ ಎಂಬ ಅನುಮಾನ ಅವಳಿ ನಗರದ ಸಾರ್ವಜನಿಕರನ್ನು ಕಾಡುತ್ತಿದೆ ಪ್ರೆಸಿಡೆಂಟ್ ಹೋಟೆಲ್ ಸೇರಿದಂತೆ ಹತ್ತಾರು ಕಡೆಗಳಲ್ಲಿ ಪ್ರಯಾಣಿಕರ ಅಳಲು ಕಂಡು ಬರುತ್ತದೆ

ಬೇಂದ್ರೆ-ಸರ್ಕಾರಿ ಬಸ್‌ಗಳ ದರ್ಬಾರ್, ಅಧಿಕಾರಿಗಳ ಮೌನಕ್ಕೆ ಸಾರ್ವಜನಿಕರ ಧಿಕ್ಕಾರ ವಾಗುತ್ತಿದೆ. ಹಗಲಿಡೀ ಸುಡುವ ಬಿಸಿಲು, ದಿಢೀರನೆ ಅಬ್ಬರಿಸುವ ಮಳೆ ಈ ನಡುವೆ ತಲೆಯ ಮೇಲೊಂದು ಸೂರಿಲ್ಲದೆ, ನಿಲ್ಲಲು ಸರಿಯಾದ ಜಾಗವಿಲ್ಲದೆ ರಸ್ತೆ ಬದಿಯಲ್ಲೇ ಬಸ್‌ಗಳಿಗಾಗಿ ಗಂಟೆಗಟ್ಟಲೆ ಕಾಯುವ ಪ್ರಯಾಣಿಕರ ನರಕ ಯಾತನೆ ಹುಬ್ಬಳ್ಳಿಯಿಂದ ಹಿಡಿದು ಧಾರವಾಡ ವರೆಗೆ ಹೋಗು ವಾಗ ಹಾಗೂ ಬರುವಾಗ ಒಂದೇ ಒಂದು ಬಸ್ ಸ್ಟಾಪ್ ಗಳು ಇಲ್ಲ. ಆದರೆ, ಸಾರ್ವಜನಿಕರ ಈ ಗೋಳನ್ನು ಕೇಳಬೇಕಾದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಬಿಆರ್‌ಟಿಎಸ್ ಹಾಗೂ ಜಿಲ್ಲಾಡಳಿತ ಸಂಪೂರ್ಣ ಕಣ್ಣು ಮುಚ್ಚಿ ಕುಳಿತಿವೆ.

ಇಲ್ಲಿನ ಪ್ರತಿಷ್ಠಿತ ಪ್ರೆಸಿಡೆಂಟ್ ಹೋಟೆಲ್ ಮುಂಭಾಗದ ಸಿಗ್ನಲ್ ಬಳಿ ನಿತ್ಯ ನೂರಾರು ಪ್ರಯಾಣಿಕರು ಬೇಂದ್ರೆ ಹಾಗೂ ಸರ್ಕಾರಿ ಸಿಟಿ ಬಸ್‌ಗಳಿಗಾಗಿ ಕಾಯುತ್ತಾರೆ. ಆದರೆ ಇಲ್ಲಿ ಪ್ರಯಾಣಿಕರಿಗೆ ಕನಿಷ್ಠ ರಕ್ಷಣೆ ನೀಡುವ ಒಂದು ವ್ಯವಸ್ಥಿತ ಬಸ್ ಶೆಲ್ಟರ್ (ಬಸ್ ತಂಗುದಾಣ) ಕೂಡ ಇಲ್ಲದಿರುವುದು ತೀವ್ರ ಆಕ್ರೋಶಕ್ಕೆ ಕಾರಣ ವಾಗಿದೆ. ಸುಡು ಬಿಸಿಲು ಅಥವಾ ಭಾರಿ ಮಳೆ ಬಂದಾಗ ಪ್ರಯಾಣಿಕರು ಆಶ್ರಯಕ್ಕಾಗಿ ಹೋಟೆಲ್ ಆವರಣದತ್ತ ಹೋದರೆ, ಅಲ್ಲಿನ ಖಾಸಗಿ ಭದ್ರತಾ ಸಿಬ್ಬಂದಿ ಒಳಗೆ ನಿಲ್ಲಲು ಬಿಡುವುದಿಲ್ಲ. ಅನಿವಾರ್ಯವಾಗಿ ಸಾರ್ವಜನಿಕರು, ಮಹಿಳೆ ಯರು, ವೃದ್ಧರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮಳೆ-ಬಿಸಿಲಿಗೆ ಸಿಕ್ಕು ರಸ್ತೆಯಲ್ಲೇ ತತ್ತರಿಸಬೇಕಾದ ಪರಿಸ್ಥಿತಿ ಇದೆ.

ಇನ್ನೂ ಬಸ್ ಚಾಲಕರು ಬಸ್‌ಗಳನ್ನು ನಿಗದಿತ ನಿಲ್ದಾಣಗಳ ಬದಲಾಗಿ ನೇರವಾಗಿ ಟ್ರಾಫಿಕ್ ಸಿಗ್ನಲ್ ಮಧ್ಯದಲ್ಲೇ ನಿಲ್ಲಿಸು ತ್ತಿರುವುದರಿಂದ ಸಂಚಾರ ದಟ್ಟಣೆ ಹೆಚ್ಚುತ್ತಿದ್ದು, ಪ್ರಯಾಣಿಕರ ಪ್ರಾಣಕ್ಕೆ ಅಪಾಯ ತಂದೊಡ್ಡುತ್ತಿದೆ. ಇದು ಕೇವಲ ಪ್ರೆಸಿಡೆಂಟ್ ಹೋಟೆಲ್ ಮುಂಭಾಗದ ಸಮಸ್ಯೆಯಷ್ಟೇ ಅಲ್ಲ ಹುಬ್ಬಳ್ಳಿ ನಗರದ ಬಹುತೇಕ ಸಿಟಿ ಬಸ್ ನಿಲ್ದಾಣಗಳ ಕಥೆಯೂ ಇದೇ ಆಗಿದೆ.

ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅವಳಿ ನಗರವನ್ನು ಸ್ಮಾರ್ಟ್ ಸಿಟಿ ಮಾಡುತ್ತೇವೆ ಎಂದು ಬೀಗುವ ಅಧಿಕಾರಿಗಳಿಗೆ ಸಾರ್ವಜನಿ ಕರಿಗೆ ಒಂದು ಮೂಲಸೌಕರ್ಯ ಬಸ್ ತಂಗುದಾಣ ಕಲ್ಪಿಸಲು ಸಾಧ್ಯವಾಗಿಲ್ಲವೇ ಎನ್ನುವುದು ಸಾರ್ವಜನಿಕರ ತೀಕ್ಷ್ಣ ಪ್ರಶ್ನೆ ಯಾಗಿದೆ. ಇನ್ನಾದರೂ ಬಿಆರ್‌ಟಿಎಸ್ ಹಾಗೂ ಪಾಲಿಕೆ ಅಧಿಕಾರಿಗಳು ಕುಂಭಕರ್ಣ ನಿದ್ರೆಯಿಂದ ಎಚ್ಚೆತ್ತುಕೊಂಡು, ತಕ್ಷಣವೇ ಇಲ್ಲಿ ಸುಸಜ್ಜಿತ ಬಸ್ ಶೆಲ್ಟರ್ ನಿರ್ಮಿಸಬೇಕಿದೆ. ಇಲ್ಲದಿದ್ದರೆ ಸಾರ್ವಜನಿಕರ ತೀವ್ರ ಪ್ರತಿಭಟನೆ ಎದುರಿಸಬೇ ಕಾದೀತು ಎಂದು ಹೊಟೇಲ್ ಉದ್ಯಮಿ ಯೊಬ್ಬರು ಸಾರ್ವಜನಿಕರ ಪರವಾಗಿ ಜಿಲ್ಲೆಯ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ ಧಾರವಾಡ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.