ಬೆಳಗಾವಿ –
ಮಹಾಮಾರಿ ಕರೋನಾ ಒಂದೇ ಕುಟುಂಬದ ನಾಲ್ವ ರನ್ನು ಬಲಿ ತಗೆದುಕೊಂಡು ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.ಜಿಲ್ಲೆಯ ರಾಮದುರ್ಗ ತಾಲ್ಲೂ ಕಿನ ಸಾಲಹಳ್ಳಿ ಪ್ರೌಢ ಶಾಲೆಯಲ್ಲಿ ಸಹಶಿಕ್ಷಕಿಯಾಗಿ ದ್ದ ರಾಜೇಶ್ವರಿ ಉದಪುಡಿ ಎಂಬುವರು ಇತ್ತೀಚಿಗೆ ನಡೆದ ಉಪಚುನಾವಣೆಯಲ್ಲಿ ಕರ್ತವ್ಯವನ್ನು ಮಾಡಿದ್ದರು.ನಂತರ ಅವರಿಗೆ ಸೋಂಕು ಕಾಣಿಸಿ ಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು.

ಚಿಕಿತ್ಸೆ ಫಲಿಸದೇ ಸಾವಿಗೀಡಾದ ನಂತರ ಇವರ ತಂದೆ ರಂಗಣ್ಣ ತಾಯಿ ಲಕ್ಷ್ಮೀ ಇವರಿಗೂ ಕೂಡಾ ಸೋಂಕು ಕಾಣಿಸಿಕೊಂಡು ಇವರಿಬ್ಬರೂ ಕೂಡಾ ಆಸ್ಪತ್ರೆಯಲ್ಲಿ ನಿಧರಾದರು. ಒಂದೇ ಕುಟುಂಬದ ಮೂವರು ನಿಧನರಾದ ನಂತರ ಶಿಕ್ಷಕಿಯ ಪತಿ ಇವರಿಗೂ ಕೂಡಾ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು.ಚಿಕಿತ್ಸೆಯನ್ನು ಪಡೆದು ಕೊಳ್ಳುತ್ತಿದ್ದ ಇವರು ಸಧ್ಯ ಇಂದು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಬೆಳಗಾವಿಯ ಉಪ ಚುನಾವಣೆ ಯಲ್ಲಿ ಕರ್ತವ್ಯವನ್ನು ಮಾಡಿದ್ದ ಶಿಕ್ಷಕಿಯಿಂದ ಬಂದ ಒಂದು ಸೋಂಕು ಸಧ್ಯ ಇಡೀ ಕುಟುಂಬವನ್ನೇ ಬಲಿ ತಗೆದುಕೊಂಡಿದ್ದು ದುರಂತವೇ ಸರಿ.

ಇನ್ನೂ ಕೋವಿಡ್ ನಿಂದಾಗಿ ಮೃತರಾದ ಶಿಕ್ಷಕಿಯ ಕುಟುಂಬಕ್ಕೆ ಸೂಕ್ತವಾದ ಪರಿಹಾರವನ್ನು ನೀಡು ವಂತೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕರು ಒತ್ತಾಯವನ್ನು ಮಾಡಿದ್ದಾರೆ.ಇನ್ನೂ ಅಗಲಿದ ಶಿಕ್ಷಕಿಯ ಕುಟುಂಬಕ್ಕೆ ನಾಗರಾಜ ಕಾಮನಹಳ್ಳಿ ಗುರು ತಿಗಡಿ ಅಶೋಕ ಸಜ್ಜನ,ಮಲ್ಲಿಕಾರ್ಜುನ ಉಪ್ಪಿನ, ಕಿರಣ ರಘುಪತಿ, ಪವಾಡೆಪ್ಪ,ಶ್ರೀಶೈಲ ತೆಗ್ಗಿ ಎಂ ಐ ಮುನವಳ್ಳಿ, ಶರಣಬಸವ ಬನ್ನಿಗೋಳ, ಎಸ್ ಎಫ್ ಪಾಟೀಲ, ಎಲ್ ಐ ಲಕ್ಕಮ್ಮನವರ ಪಿ ಎಸ್ ಅಂಕಲಿ ಶರಣು ಪೂಜಾರ, ಸಂಗಮೇಶ ಖನ್ನಿನಾಯ್ಕರ,, ಚಂದ್ರಶೇಖರ್ ಶೆಟ್ರು, ಹನುಮಂತಪ್ಪ ಬೂದಿಹಾಳ, ಎನ್ ಎಂ ಕುಕನೂರ, ಆರ್ ಎಂ ಕಮ್ಮಾರ, ಜಿ ಟಿ ಲಕ್ಷ್ಮೀದೇವಮ್ಮ ಕೆ ಬಿ ಕುರಹಟ್ಟಿ, ಎಂ ವಿ ಕುಸುಮಾ ಜೆ ಟಿ ಮಂಜುಳಾ, ರಾಜಶ್ರೀ ಪ್ರಭಾಕರ, ಆರ್ ನಾರಾಯಣಸ್ವಾಮಿ ಚಿಂತಾಮಣಿ, ಬಾಬಾಜಾನ ಮುಲ್ಲಾ, ರಂಜನಾ ಪಂಚಾಳ ಸುವರ್ಣ ನಾಯ್ಕ ಕೆ ನಾಗರಾಜ, ಬಿ ಎಸ್ ಮಂಜುನಾಥ, ಅಕ್ಕಮಹಾ ದೇವಿ ನೂಲ್ವಿ ಸೇರಿದಂತೆ ಹಲವರು ಭಾವಪೂರ್ಣ ಸಂತಾಪವನ್ನು ಸೂಚಿಸಿ ನಮನವನ್ನು ಸಲ್ಲಿಸಿದ್ದಾರೆ.