ಹುಬ್ಬಳ್ಳಿ –
ಕರ್ನಾಟಕ ಸರ್ಕಾರದ ನಿರ್ದೇಶನದ ಮೇರೆಗೆ ನವೆಂಬರ್ 30 ರಿಂದ ಡಿಸೆಂಬರ್ 08 ವರೆಗೆ ಸಕಾಲ ಸಪ್ತಾಹ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾರಿಗೆ ಇಲಾಖೆಯಲ್ಲಿ ಸಕಾಲ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ಧಾರವಾಡ ಜಿಲ್ಲೆಯ ಅಧೀನ ಕಚೇರಿಗಳಿಗೆ ಸಮಾಲೋಚಕರನ್ನು ನೇಮಿಸಲಾಗಿದೆ.
ಅಧೀಕ್ಷಕರು ಸಂಜೀವ್ ಹೊಂಡೇದ್ ಮೊಬೈಲ್ ಸಂಖ್ಯೆ 7411304291, ಅಧೀಕ್ಷಕಿ ಕೆ.ಎಂ.ಗೀತಾ , ಮೊಬೈಲ್ ಸಂಖ್ಯೆ 9741388128 ಹಾಗೂ ಎನ್ ಐಸಿ ಟೆಕ್ನಿಕಲ್ ಅಸಿಸ್ಟಂಟ್ ಶಿಲ್ಪಾ ಬಂಡಿವಾಡ , ಮೊಬೈಲ್ ಸಂಖ್ಯೆ 9035540934 ಇವರುಗಳನ್ನು ಸಕಾಲ ಸಮಾಲೋಚಕರನ್ನಾಗಿ ನೇಮಿಸಿಲಾಗುದ್ದು, ಸಾರ್ವಜನಿಕರು ಸಾರಿಗೆ ಇಲಾಖೆಯ ಸಕಾಲ ಸೇವೆಗೆ ಸಂಬಂಧಿಸಿದಂತೆ ಮೇಲ್ಕಂಡ ಸಿಬ್ಬಂದಿಗಳಿಂದ ಮಾಹಿತಿಯನ್ನು ಪಡೆಯಬಹುದು ಎಂದು ಧಾರವಾಡ ಪೂರ್ವ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯ ನಾಲ್ವತ್ವಾಡಾಮಠ ತಿಳಿಸಿದ್ದಾರೆ.
ಸಾರಿಗೆ ಅಧಿಕಾರಿ ಅಪ್ಪಯ್ಯ ನಾಲ್ವತ್ವಾಡಾಮಠ