ಹೈದರಾಬಾದ್ –
ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೋವಿಡ್ ಹಿನ್ನೆ ಲೆಯಲ್ಲಿ ದೇಶದ ಹಲವು ರಾಜ್ಯಗಳಲ್ಲಿ SSLC PUC ಪರೀಕ್ಷೆ ಗಳನ್ನು ರದ್ದು ಮಾಡಲಾಗಿದೆ. ಈಗಾಗಲೇ ದೇಶದ ಹಲವು ರಾಜ್ಯಗಳು ವಿದ್ಯಾರ್ಥಿಗಳ ಭವಿಷ್ಯ ದ ದೃಷ್ಟಿಯಿಂದ ಈ ಒಂದು ತೀರ್ಮಾನವನ್ನು ತಗೆ ದುಕೊಂಡಿದ್ದು ಇದಕ್ಕೆ ಈಗ ತೆಲಂಗಾಣ ಸರ್ಕಾರ ಕೂಡಾ ಸೇರಿಕೊಂಡಿದೆ ಹೌದು ಕೋವಿಡ್ 2ನೇ ಅಲೆ ಸೃಷ್ಟಿಸಿರುವ ಭೀಕರ ಪರಿಸ್ಥಿತಿಯಿಂದಾಗಿ ರಾಜ್ಯ ದಲ್ಲಿ ಸರ್ಕಾರ SSLC ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ ಪಾಸ್ ಮಾಡಿ ಆದೇಶ ಹೊರಡಿಸಿದೆ. ಹೀಗಾಗಿ ಈ ಬಾರೀ ಪರೀಕ್ಷೆ ಬರೆಯಬೇಕಿದ್ದ 5,21,393 ವಿದ್ಯಾರ್ಥಿಗಳು ಯಾವುದೇ ಪರೀಕ್ಷೆ ಇಲ್ಲದೇ ಪಾಸ್ ಆಗಲಿದ್ದಾರೆ
ತೆಲಂಗಾಣ ಶಿಕ್ಷಣ ಸಚಿವೆ ಸಬಿತಾ ಇಂದ್ರ ರೆಡ್ಡಿ ಈ ಬಗ್ಗೆ ಮಾಹಿತಿ ನೀಡಿದ್ದು ಸಿಎಂ ಕೆ ಚಂದ್ರಶೇಖರ್ ರಾವ್ ಅವರ ಆದೇಶದ ಮೇರೆಗೆ ಪರೀಕ್ಷೆಗಳಿಲ್ಲದೇ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿದೆ. ವಿದ್ಯಾರ್ಥಿ ಗಳ ಆಂತರಿಕ ಮೌಲ್ಯಮಾಪನವನ್ನು ಆಧರಿಸಿ ಫಲಿತಾಂಶ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.ಈ ನಡುವೆ ವಿದ್ಯಾರ್ಥಿಗಳಿಗೂ ಅದ್ರ ಲ್ಲೂ SSLC ವಿದ್ಯಾರ್ಥಿಗಳಿಗೆ ಪರೀಕ್ಷೆ ತೊಂದರೆಯಾ ಗಿದೆ.ಹಲವು ಸಾಮಾಜಿಕ ಹೋರಾಟಗಾರರು ಮಕ್ಕಳ ಹಕ್ಕು ಹೋರಾಟಗಾರರು SSLC ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ನೇರವಾಗಿ ಪಾಸ್ ಮಾಡುವಂತೆ ಆಗ್ರಹಿಸಿದ್ದರು ಇದರೊಂದಿಗೆ ಸೋಂಕು ಹೆಚ್ಚಾಗಿರುವ ಹಿನ್ನಲೆಯಲ್ಲಿ ಈ ಒಂದು ನಿರ್ಧಾರವನ್ನು ವಿದ್ಯಾರ್ಥಿಗಳು ದೃಷ್ಟಿಯಿಂದ ತೆಗೆದುಕೊಳ್ಳಲಾಗಿದೆ ಎಂದರು.