ಸಾಮಾಜಿಕ ಜಾಲ ತಾಣಗಳಲ್ಲಿ ಧೂಳೆಬ್ಬಿಸಿದೆ ಸರ್ಕಾರಿ ಶಾಲಾ ಶಿಕ್ಷಕರ ಡ್ಯಾನ್ಸ್ – ಎಲ್ಲರೂ ನಾಚುವಂತೆ ಡ್ಯಾನ್ಸ್ ಮಾಡಿದ ವಿಡಿಯೊ ವೈರಲ್…..

Suddi Sante Desk

ವಿಜಯಪುರ –

ಸಾಮಾನ್ಯವಾಗಿ ಪ್ರತಿಯೊಬ್ಬರಲ್ಲಿಯೂ ಒಂದೊಂದು ಪ್ರತಿಭೆ ಇದ್ದೇ ಇರುತ್ತವೆ ಎನ್ನೊದಕ್ಕೆ ರಾಜ್ಯದಲ್ಲಿನ ಸರ್ಕಾರಿ ಶಾಲಾ ಶಿಕ್ಷಕರೊಬ್ಬರ ಡ್ಯಾನ್ಸ್ ಸಾಕ್ಷಿ

ಹೌದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆ ಶಾಲಾ ಶಿಕ್ಷಕರೊಬ್ಬರು ಶಾಲೆಯಲ್ಲಿ ನೃತ್ಯ ಮಾಡಿರುವ ವಿಡಿಯೋ ಈಗ ಸಾಕಷ್ಟು ಪ್ರಮಾಣದಲ್ಲಿ ವೈರಲ್ ಆಗಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಕ ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗಿದ್ದು ಸಧ್ಯ ಧೂಳೆಬ್ಬಿಸಿದ್ದು ವಯಸ್ಸಿನಲ್ಲಿ ಪ್ರತಿಭೆ ಇದೆ ಎಂಬೊಂದನ್ನು ಈ ಮೂಲಕ ಇವರು ತೋರಿಸಿಕೊಟ್ಟಿದ್ದಾರೆ.

ವಿಜಯಪುರ ತಾಲೂಕಿನ ಅಂಕಲಗಿ ಗ್ರಾಮದ ಕರಾಳ ವಸ್ತಿ ಪ್ರಾಥಮಿಕ ಶಾಲೆಯ ವಿಜಯ ಯಮನಪ್ಪ ಮುಳವಾಡ್ ಎಂಬ ಶಿಕ್ಷಕ ಜಾನಪದ ಹಾಡಿಗೆ ಸಖತ್ ಸ್ಟೇಪ್ ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಾಕಷ್ಟು ವೈರಲ್ ಆಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.