ಚಡಚಣ –
ಸರ್ಕಾರಿ ನೌಕರರು ಹಾಗೂ ಶಾಲಾ ಶಿಕ್ಷಕರ ಕರ್ತವ್ಯಕ್ಕೆ ಪದೆ ಪದೇ ಅಡ್ಡಿಪಡಿಸುತ್ತಿರುವ ಕೆಆರ್ಎಸ್ ಪಕ್ಷದ ನಗರ ಘಟಕದ ಅಧ್ಯಕ್ಷ ಅಣ್ಣಪ್ಪ ಪೂಜಾರಿ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಚಡಚಣ ತಾಲೂಕು ಸರ್ಕಾರಿ ನೌಕರರ ಸಂಘ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರು ಬುಧವಾರ ತಹಸೀಲ್ದಾರ್ ಸಂಜಯ ಇಂಗಳೆ ಅವರಿಗೆ ಜಿಲ್ಲಾಧಿಕಾರಿ ಗೆ ಮನವಿ ಸಲ್ಲಿಸಿದರು.
ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಬಿ.ಎಸ್.ಮಜ್ಜಗಿ ಮಾತನಾಡಿ ಅಣ್ಣಪ್ಪ ಪೂಜಾರಿ ಸರ್ಕಾರಿ ಶಾಲೆ, ಕಚೇರಿಗಳಿಗೆ ತಾನು ಪತ್ರಕರ್ತನೆಂದು ಹಾಗೂ ಕೆ ಆರ್ ಎಸ್ ಪಕ್ಷದವನೆಂದು ಹೇಳಿಕೊಂಡು ಶಾಲೆ, ಕಚೇರಿ ಸಮಯದಲ್ಲಿ ನೌಕರರು ಕರ್ತವ್ಯ ದಲ್ಲಿ ಆಗಮಿಸಿ ನೌಕರರಿಗೆ ವಿನಾಕಾರಣ ಕರ್ತವ್ಯಕ್ಕೆ ಅಡ್ಡಿಪಡಿಸಿ, ನೌಕರರ ವಿಡಿಯೋ ಚಿತ್ರೀಕರಣ ಮಾಡುತ್ತಾನೆ.
ನೌಕರರಿಗೆ ಏಕವಚನದಲ್ಲಿ ಸಂಭೋದಿಸುವುದು, ಅವಾಚ್ಯ ಶಬ್ಧಗಳಿಂದ ನಿಂದಿಸುವುದು ಅಲ್ಲದೆ, ನೌಕರರ, ಮಹಿಳಾ ನೌಕರರ ಮಾನಹಾನಿಯಾಗುವ ರೀತಿಯಲ್ಲಿ ವರ್ತಿಸುತ್ತಾ ಶಾಲೆ ಯಲ್ಲಿನ ಹೆಣ್ಣು ಮಕ್ಕಳ ವಿಡಿಯೋ ಮಾಡುತ್ತಾ ಆ ವಿಡಿಯೋ ಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕಿ ಅದರಿಂದ ಮಕ್ಕಳ ಪಾಲಕ ಪೋಷಕರಿಗೆ ಮಾನಸಿಕ ಹಿಂಸೆಯಾಗುತ್ತಿದೆ.
ವಿಡಿಯೋ ಚಿತ್ರೀಕರಣದಿಂದ ಮಕ್ಕಳ ಸುರಕ್ಷತೆಗೆ ಧಕ್ಕೆ ಉಂಟಾಗುತ್ತಿದೆ ಈತನ ವರ್ತನೆಯಿಂದ ತಾಲೂಕಿನ ನೌಕರರಲ್ಲಿ ಭಯದ ವಾತಾವರಣ ಉಂಟಾಗಿ ನೌಕರರು ಕರ್ತವ್ಯ ನಿರ್ವಹಿ ಸುವಲ್ಲಿ ತೊಂದರೆ ಆಗುತ್ತಿದೆ. ಈ ಬಗ್ಗೆ ಡಿಸಿ ಗಮನ ಹರಿಸಿ ಆತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಸಂಜಯ ಇಂಗಳೆ, ಈ ಮನವಿಯನ್ನು ಜಿಲ್ಲಾಧಿಕಾರಿ ಗಳಿಗೆ, ಜಿಲ್ಲಾ ಪೊಲೀಸ್ ವರಿಷ್ಠಾ ಕಾರಿಗಳಿಗೂ ತಲುಪಿಸುವುದಾಗಿ ತಿಳಿಸಿದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಅನಿಲ ಸೊನ್ನಗಿ, ಕಾರ್ಯದರ್ಶಿ ಬಸವಂತ ಉಮರಾಣಿ, ಕಾರ್ಯದರ್ಶಿ ವಿಠ್ಠಲ ಕಾಂಬಳೆ, ಶಿಕ್ಷಕರ ಸೊಸೈಟಿ ಅಧ್ಯಕ್ಷ ಗುರು ಜೇವೂರ, ಉಪಾಧ್ಯಕ್ಷ ಮಕಾನದಾರ, ಸರ್ಕಾರಿ ನೌಕರ ಸಂಘದ ಸದಸ್ಯರಾದ ವಿಠ್ಠಲ ಕೊಳಿ, ಸಲೀಂ ಮಕಾನದಾರ, ಎನ್.ಪಿ.ಎಸ್ ನೌಕರ ಸಂಘದ ಅಧ್ಯಕ್ಷ ಎಸ್. ಡಿ.ಬಗಲಿ ಮತ್ತಿತರರಿದ್ದರು.
ಸುದ್ದಿ ಸಂತೆ ನ್ಯೂಸ್ ಚಡಚಣ…..



