ಚಾಮರಾಜಪೇಟೆ –
ಚಾಮರಾಜಪೇಟೆ ಯ ಅಮ್ಮತ್ತಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಬೆಂಗಳೂರಿನ ಅಕ್ಷೋಭ್ಯ ಫೌಂಡೇಶನ್ ಪದಾಧಿಕಾರಿಗಳು ನೋಟ್ ಬುಕ್,ಸೇರಿದಂತೆ ಕಲಿಕಾ ಪರಿಕರ ಗಳನ್ನು ವಿತರಿಸಿದರು.ಬೆಂಗಳೂರಿನ ಅವಿನ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಇವರ ಪ್ರಾಯೋಜಕತ್ವದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ನೋಟ್ಬುಕ್ ಹಾಗೂ ಅಗತ್ಯ ಲೇಖನ ಸಾಮಗ್ರಿ ಗಳನ್ನು ವಿತರಿಸಲಾಯಿತು.

ಪರಿಸರ ನೈರ್ಮಲ್ಯಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಬೆಂಗಳೂರಿನ ಪರಿಸರ ಸಂಘದ ಸಹಕಾರದೊಂದಿಗೆ ಕಸ ಬೇರ್ಪಡಿಸಿ ಸಂಗ್ರಹಿ ಸಲು ನಾಲ್ಕು ಕಸದ ಬುಟ್ಟಿಗಳನ್ನು ನೀಡಿದರು.ಫೌಂಡೇಶನ್ ವ್ಯವಸ್ಥಾಪಕರಾದ ಅನಿತಾ, ಸಿನಿ ರಂಗದ ಮನೋಹರ ಮೂರ್ತಿ, ಪದ್ಮಾವತಿ, ಅದ್ವಿಕ್ ಮತ್ತು ಯಶ್ನಿಲ್, ಶಾಲೆಯ ಪ್ರಮುಖರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸುದ್ದಿ ಸಂತೆ ನ್ಯೂಸ್ ಚಾಮರಾಜಪೇಟೆ…..



