ಹುಬ್ಬಳ್ಳಿ –
ಕರ್ನಾಟಕ ಸರ್ಕಾರದ ಆದೇಶದನ್ವಯ ದಿನಾಂಕ 30/11/2020 ರಿಂದ 05/12/2020 ರ ವರೆಗೆ ಸಾರ್ವಜನಿಕ ಹಿತಾಶಕ್ತಿ ಹಿನ್ನಲೆಯಲ್ಲಿ ಕೈಗೊಳ್ಳಲಾಗುತ್ತಿರುವ “ಸಕಾಲ ಸಪ್ತಾಹ” ಕಾರ್ಯವನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ತಹಶೀಲದಾರ ಶಶಿಧರ ಮಾಡ್ಯಾಳ ಹೇಳಿದರು.ಮಿನಿ ವಿಧಾನಸೌಧದಲ್ಲಿ ಆಯೋಜಿಸಲಾದ “ಸಕಾಲ ಸಪ್ತಾಹ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾರ್ವಜನಿಕರು ಸಕಾಲ ಯೋಜನೆಯಡಿಯಲ್ಲಿ ತಮ್ಮ ಅರ್ಜಿಗಳನ್ನು ಸಲ್ಲಿಸಿ, ಉಪಯುಕ್ತ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದರು. ಈ ಯೋಜನೆಯು ಜನ ಸಾಮಾನ್ಯರಿಗೆ ತಲುಪುವ ಮಟ್ಟಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದಂರ್ಭದಲ್ಲಿ ಹುಬ್ಬಳ್ಳಿ ಗ್ರಾಮೀಣ ತಹಶೀಲದಾರರಾದ ಪ್ರಕಾಶ ನಾಶಿ ಅವರು 2011 ರಲ್ಲಿ ಪ್ರಾರಂಭಗೊಂಡ “ಸಕಾಲ ಯೋಜನೆ” ರೈತಾಪಿ ವರ್ಗ ಸೇರಿದಂತೆ ಎಲ್ಲರಿಗೂ ತಮ್ಮ ನಿಗದಿತ ಸಮಯಕ್ಕೆ ಮಾಹಿತಿಯನ್ನು ಪಡೆಯಬಹುದಾಗಿದ್ದು ತಾವು ಸಲ್ಲಿಸುವ ಅರ್ಜಿಯು ಗುಣಾತ್ಮಕವನ್ನು ಹೊಂದಿರತಕ್ಕದ್ದು ಹಾಗೆಯೇ ಮಾಹಿತಿಯು ಸ್ಪಷ್ಟವಾಗಿರಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಹರ ಠಾಣೆ ಇನ್ಸ್ಪೆಕ್ಟರ್ ಎಮ್ ಎಸ್ ಪಾಟೀಲ್, ತಾ.ಪಂ.ಕಾರ್ಯನಿರ್ವಣಾಧಿಕಾರಿ ಗಂಗಾಧರ ಕಂದಕೂರ, ಉಪ ತಹಶೀಲದಾರ ವಿಜಯ್ ಕಡಕೋಳ, ವಾರ್ತಾ ಇಲಾಖೆಯ ಅಧಿಕ್ಷಕ ವಿನೋದ ಕುಮಾರ.ಡಿ , ಶಿರೆಸ್ತೆದಾರ ಎ.ಜಿ.ನಾಯಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.