ಧಾರವಾಡ –
ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದಂತೆ ಇತ್ತ ಧಾರವಾಡ ಜಿಲ್ಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಂಡಿವೆ.ಹೌದು ಇಂದಿನಿಂದ ರಾಜ್ಯದಲ್ಲಿ ಹೊಸ ಶೈಕ್ಷಣಿಕ ವರ್ಷ ಆರಂಭಗೊಂಡಿದ್ದು ಹೀಗಾಗಿ ಜಿಲ್ಲೆಯಲ್ಲಿ ಮಕ್ಕಳಿಗೆ ಒಂದನೆಯ ತರಗತಿಗೆ ಶಾಲೆಗೆ ದಾಖಲಾತಿ ಮಾಡಿಕೊಳ್ಳುವ ಮೂಲಕ ಸಾಂಕೇತಿಕ ವಾಗಿ ಶಾಲಾ ಪ್ರಾರಂಭೋತ್ಸವವನ್ನು ಆರಂಭ ಮಾಡಲಾಯಿತು.
ಹೌದು ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸರ್ಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು ಮುಖ್ಯ ಶಿಕ್ಷಕಿ ಬಿ ಎಂ ಸುತಾರ ಸಹ ಶಿಕ್ಷಕಿ ಕೆ ಎಂ ಶಿವಳ್ಳಿ, ಸಹ ಶಿಕ್ಷಕ ಎಲ್ ಐ ಲಕ್ಕಮ್ಮನವರ ಶಾಲೆಗೆ ಆಗಮಿಸಿದ ಪೊಷಕರಿಗೆ ಸ್ವಾಗತ ಮಾಡಿಕೊಂಡು ನಂತರ ಶಾಲೆಗೆ ಮಕ್ಕಳ ದಾಖಲಾತಿ ಯನ್ನು ಮಾಡಿಕೊಂಡರು.ಇನ್ನೂ ಇತ್ತ DDPI ಮತ್ತು ಬಿಇಓ ಸೇರಿದಂತೆ ಹಲವು ಅಧಿಕಾರಿ ಗಳು ಧಾರವಾಡ ತಾಲೂಕಿನ ಕೆಲ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
ನಗರದ ಹೆಬ್ಬಳ್ಳಿ ರಸ್ತೆಯಲ್ಲಿರುವ ದುರ್ಗಾ ಕಾಲೋ ನಿಯ ಸರ್ಕಾರಿ ಶಾಲೆಗೆ ಹೊಸ ಟಚ್ ನೀಡಲಾಗಿದೆ. ಶಾಲೆಗೆ ಹೈಟೆಕ್ ಟಚ್ ನೀಡಲಾಗಿದ್ದು ಹೀಗಾಗಿ ಶಾಲೆ ಗೆ ಡಿಡಿಪಿಐ ಮೋಹನ ಕುಮಾರ್ ಹಂಚಾಟಿ ಸೇರಿದಂತೆ ಹಲವರು ಭೇಟಿ ನೀಡಿದರು
ಇದೇ ವೇಳೆ ಶಾಲೆಗಳಿಗೆ ಕೆಲವೊಂದಿಷ್ಟು ಮಕ್ಕಳನ್ನು ಆಹ್ವಾನ ನೀಡಿ ಪುಸ್ತಕಗಳನ್ನು ನೀಡಲಾಯಿತು
ಇದೇ ವೇಳೆ ದುರ್ಗಾ ಕಾಲೋನಿಯ ಶಾಲೆಗೆ ರೇಲ್ವೆ ಬೋಗಿ ಹಾಗೆ ಟಚ್ ನೀಡಲಾಗಿದೆ ಹೀಗಾಗಿ ಶಾಲೆಗೆ ಆಗಮಿಸಿ ವೀಕ್ಷಣೆ ಮಾಡಿದರು.
DDPI ಅವರೊಂದಿಗೆ ಬಿಇಓ ಉಮೇಶ ಬೊಮ್ಮಕ್ಕ ನವರ ಸೇರಿದಂತೆ ಶಾಲೆಯ ಶಿಕ್ಷಕ ಬಂಧುಗಳು ಉಪಸ್ಥಿತರಿದ್ದರು