ನವದೆಹಲಿ –
ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಕೇಂದ್ರ ಸಂಪುಟ ಪುನರ್ ರಚನೆಯಾಗುತ್ತಿದ್ದು ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಒಟ್ಟು 12 ಸಚಿವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ, ಆರೋಗ್ಯ ಸಚಿವ ಹರ್ಷವರ್ಧನ್, ಐಟಿ ಸಚಿವ ರವಿಶಂಕರ್ ಪ್ರಸಾದ್, ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಸೇರಿದಂತೆ 12 ಸಚಿವರ ರಾಜೀನಾಮೆ ನೀಡಿದ್ದು ಈಗಾಗಲೇ ಇವರ ರಾಜೀನಾಮೆ ಗಳು ಅಂಗೀಕೃತ ಗೊಂಡಿದೆ.
ರಾಜೀನಾಮೆ ನೀಡಿದ ಸಚಿವರು
1) ಡಿ.ವಿ.ಸದಾನಂದ ಗೌಡ
2) ರವಿಶಂಕರ್ ಪ್ರಸಾದ್
3) ತಾವರ್‌ಚಂದ್ ಗೆಹ್ಲೋಟ್
4) ರಮೇಶ್ ಪೋಖ್ರಿಯಾಲ್ ನಿಶಾಂಕ್
5) ಹರ್ಷವರ್ಧನ್
6) ಪ್ರಕಾಶ್ ಜಾವಡೇಕರ್
7) ಸಂತೋಷ್ ಕುಮಾರ್ ಗಂಗ್ವಾರ್
8) ಬಾಬುಲ್ ಸುಪ್ರಿಯೊ
9) ಧೋತ್ರೆ ಸಂಜಯ್ ಶಾಮರಾವ್
10) ರತನ್ ಲಾಲ್ ಕಟಾರಿಯಾ
11) ಪ್ರತಾಪ್ ಚಂದ್ರ ಸಾರಂಗಿ
12) ಸುಶ್ರೀ ದೇಬಶ್ರೀ ಚೌಧರಿ