ತುಮಕೂರು –
ಸ್ನೇಹಿತರೊಂದಿಗೆ ಮಾತನಾಡಿಕೊಂಡು ಮನೆಯತ್ತ ಹೊರಟಿದ್ದ ಯುವಕನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರಿನ ಎಸ್ ಐಟಿ ಬಡಾವಣೆಯ ಮಂಜುಶ್ರೀ ಬಾರ್ ಎದುರು ಈ ಒಂದು ಘಟನೆ ನಡೆದಿದೆ. ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ರೌಡಿಶೀಟರ್ ಆಗಿದ್ದ ಮಂಜುನನ್ನು ಹತ್ಯೆ ಮಾಡಲಾಗಿದೆ.
ತುಮಕೂರು ನಗರದ ಎಸ್.ಐ.ಟಿ ಬಡವಾವಣೆಯ ಮಂಜುಶ್ರೀ ಬಾರ್ ಎದುರು ಈ ಒಂದು ಕೊಲೆ ನಡೆದಿದೆ.ಮಂಜು ಅಲಿಯಾಸ್ ಆರ್ ಎಕ್ಸ್ ಮಂಜ (31) ಕೊಲೆಯಾದ ರೌಡಿ ಶೀಟರ್ .ನಾಲ್ಕೈದು ರೌಡಿಗಳಿಂದ ಈ ಒಂದು ಕೃತ್ಯ ನಡೆದಿದೆ.ಹೊಟ್ಟೆಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು . ಕೊಲೆ ಮಾಡಿ ಮತ್ತೊಂದು ರೌಡಿ ಟೀಮ್ ಪರಾರಿಯಾಗಿದೆ.
ಸ್ನೇಹಿತರ ಜೊತೆ ಮಾತನಾಡಿ ಇನ್ನೇನು ಮನೆಗೆ ಹೋಗಬೇಕು ಎನ್ನುವಾಗಲೇ ಈ ಒಂದು ಘಟನೆ ನಡೆದಿದೆ. ಇನ್ನೂ ಕೊಲೆಯ ವಿಷಯವನ್ನು ತಿಳಿದ ಎನ್ ಇಪಿಎಸ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದರು.
ಕೂಡಲೇ ಸ್ಥಳದಲ್ಲಿನ ಸುತ್ತ ಮುತ್ತಲಿನ ಸಿಸಿ ಟಿವಿ ಹಾಗೇ ಸಾರ್ವಜನಿಕರಿಂದ ಮಾಹಿತಿಯನ್ನು ಪಡೆದುಕೊಂಡರು. ಈ ಕುರಿತಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಎನ್.ಇ.ಪಿ.ಎಸ್ ಪೊಲೀಸರು ಚಾಕು ಇರಿದು ಪರಾರಿಯಾಗಿರುವವವ ಬಂಧನಕ್ಕೇ ಜಾಲ ಬೀಸಿದ್ದಾರೆ.