ಬೆಂಗಳೂರು –
ಕೊನೆಗೂ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸಲು ICMR ಸಲಹೆ ಯನ್ನು ನೀಡಿದ್ದು ಆರಂಭ ಮಾಡಲು ಮುಂದಾದರೆ ಮೊದಲಿಗೆ ಪ್ರಾಥಮಿಕ ಹಂತದ ಶಾಲೆಗಳನ್ನು ಆರಂಭಿಸುವುದು ಉತ್ತಮ ಎಂದು ಐಸಿಎಂಆರ್ ಸಲಹೆ ನೀಡಿದೆ.ರಾಜ್ಯದಲ್ಲಿ ಆಗಸ್ಟ್ ಮೊದಲ ವಾರದಿಂದ ಶಾಲೆ, ಕಾಲೇಜುಗಳನ್ನು ಆರಂಭಿಸಲು ಸರ್ಕಾರ ಚಿಂತಿಸಿದೆ. ಹಂತ ಹಂತವಾಗಿ ಶಾಲೆ-ಕಾಲೇಜುಗಳನ್ನು ಆರಂಭಿಸಲಾಗುವುದು ಎಂದು ಹೇಳಲಾಗಿದೆ.
ಮೊದಲಿಗೆ 10, 12 ನೇ ತರಗತಿ, ನಂತರ 8,9 ಮತ್ತು 11 ನೇ ತರಗತಿಗಳನ್ನು ಆರಂಭಿಸಲಾಗುವುದು. ಬಳಿಕ 5, 6, 7 ನೇ ತರಗತಿ ಮಕ್ಕಳಿಗೆ ವಿದ್ಯಾಗಮ ಆರಂಭಿಸುವ ಸಾಧ್ಯತೆ ಇದೆ. 5, 6, 7 ನೇ ತರಗತಿಗೆ ಮಕ್ಕಳಿಗೆ ಮೊದಲಿಗೆ ಶಾಲೆ ಆವರಣದಲ್ಲಿ ವಿದ್ಯಾಗಮ ತರಗತಿಗಳನ್ನು ಆರಂಭಿಸಲಾಗುವುದು. ನಂತರ ಒಂದರಿಂದ ನಾಲ್ಕನೇ ತರಗತಿ ಮಕ್ಕಳಿಗೆ ಶಾಲೆ ಆವರಣದಲ್ಲಿ ವಿದ್ಯಾಗಮ ಆರಂಭಿಸಲಾಗು ತ್ತದೆ. ಹೀಗೆ ಹಂತ ಹಂತವಾಗಿ ಶಾಲೆಗಳನ್ನು ಆರಂಭಿಸಲಾಗುವುದು ಎನ್ನಲಾಗಿದ್ದು ಈ ಕುರಿತು ಸಲಹೆಯನ್ನು ನೀಡಿದ್ದು ಸರ್ಕಾರ ಇದರ ಮೇಲೆ ಯಾವ ನಿರ್ಧಾರವನ್ನು ತಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು.