ಧಾರವಾಡ –

ಯೊಗೀಶಗೌಡ ಕೊಲೆ ಪ್ರಕರಣದಲ್ಲಿ ಬಂಧನವಾಗಿ ರುವ ಮಾಜಿ ಸಚಿವ ವಿನಯ ಕುಲಕರ್ಣಿ ಸಹಿ ಮಾಡಿ ಮರಳಿ ಬೆಳಗಾವಿ ಜೈಲಿಗೆ ಮರಳಿದ್ದಾರೆ. ಬೆಳಗಾವಿಯ ಹಿಂಡಗಲಾ ಜೈಲಿನಿಂದ ಭದ್ರತೆಯ ನಡುವೆ ಧಾರವಾಡಗೆ ಪೊಲೀಸರು ಕರೆದುಕೊಂಡು ಬಂದರು.


ಮೊದಲು ನಿಗರ ಮಿನಿ ವಿಧಾನಸೌಧ ದಲ್ಲಿರುವ ಉಪನೋಂದಣಿ ಕಚೇರಿಗೆ ಆಗಮಿಸಿ ಕೆಲವೊಂ ದಿಷ್ಟು ದಾಖಲೆಗಳಿಗೆ ಸಹಿಯನ್ನು ಮಾಡಿದರು. ನಂತರ ಅಲ್ಲಿಂದ ಹಳೇ ಡಿಎಸ್ಪಿ ವೃತ್ತದಲ್ಲಿರುವ ಬ್ಯಾಂಕ್ ವೊಂದಕ್ಕೆ ಕರೆದುಕೊಂಡು ಬಂದು ಜಂಟಿ ಖಾತೆಗೆ ಸಹಿಯನ್ನು ಮಾಡಿಸಿದರು.
ಈ ಕುರಿತಂತೆ ನ್ಯಾಯಾಲಯಕ್ಕೆ ಮಾಜಿ ಸಚಿವ ವಿನಯ ಕುಲಕರ್ಣಿ ಮನವಿಯನ್ನು ಮಾಡಿದ್ದರು. ನ್ಯಾಯಾಲಯದ ಅನುಮತಿಯ ಹಿನ್ನಲೆಯಲ್ಲಿ ಇವರನ್ನು ಕರೆದುಕೊಂಡು ಬಂದು ಎಲ್ಲಾ ಕಾರ್ಯ ಗಳನ್ನು ಮುಗಿಸಿ ಮರಳಿ ಪೊಲೀಸರು ಭದ್ರತೆಯ ನಡುವೆ ಬೆಳಗಾವಿಯ ಹಿಂಡಗಲಾ ಜೈಲಿಗೆ ಕರೆದು ಕೊಂಡು ಹೋದರು.

ಇನ್ನೂ ಇವರು ಬಂದ ಹಿನ್ನಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತ ರು ಅಭಿಮಾನಿಗಳು ಆಪ್ತರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನಸ್ತೋಮ ಸೇರಿದ್ದರು.ವಿನಯ ಅಣ್ಣನಿಗೆ ಜೈ ವಿನಯ ಅಣ್ಣನಿಗೆ ಜೈ ಎನ್ನುತ್ತಿರುವ ಚಿತ್ರಣ ಕಂಡು ಬಂದಿತು.ಜೊತೆಗೆಅಭಿಮಾನಿಗಳಿಗೂ ಕೂಡಾ ವಿನಯ ಕುಲಕರ್ಣಿ ಕೈ ಮುಗಿದು ತೆರಳಿದರು.

ಒಟ್ಟಾರೆ ಜಿಪಿಎ ವಿಚಾರ ಕುರಿತಂತೆ ಸಹಿ ಮಾಡಲು ಮಾಜಿ ಸಚಿವ ವಿನಯ ಕುಲಕರ್ಣಿ ಧಾರವಾಡ ಗೆ ಆಗಮಿಸಿ ಎಲ್ಲಾ ಕಾರ್ಯಗಳನ್ನು ಮುಗಿಸಿ ನಂತರ ಬೆಳಗಾವಿಯ ಹಿಂಡಗಲಾ ಜೈಲಿಗೆ ಕರೆದುಕೊಂಡು ಹೋದರು.

ಇನ್ನೂ ಇದೇ ವೇಳೆ ವಿನಯ ಕುಲಕರ್ಣಿಗೆ ಅಭಿಮಾ ನಿಯೊಬ್ಬ ಸರ್ ಎನ್ನುತ್ತಿದ್ದಂತೆ ಏನು ಮಾಡಲಿಕ್ಕಾ ಗೊದಿಲ್ಲ ಎನ್ನುತ್ತಾ ಕೈ ಕುಲಕಿ ಬ್ಯಾಂಕ್ ಗೆ ತೆರಳಿದರು. ಇದೇ ವೇಳೆ ಪತ್ನಿ ಮತ್ತು ಮಕ್ಕಳು ಕೂಡಾ ಬ್ಯಾಂಕ್ ಮತ್ತು ಉಪ ನೋಂದಣಿ ಕಚೇರಿಗೆ ಆಗಮಿಸಿದ್ದರು.
