ಉತ್ತರ ಪ್ರದೇಶ –
ಒಂದು ಎರಡು ಮೂರು ನಾಲ್ಕು ಐದು ಸಾಲದಂತೆ ಆರನೇಯ ಮದುವೆ.ಹೀಗೆ ಮದುವೆಯಾಗುವಾಗ ಮಾಜಿ ಸಚಿವ ರೊಬ್ಬರು ಪತ್ನಿಯೊಬ್ಬರ ಕೈಯಲ್ಲಿ ಸಿಕ್ಕಿಬಿದ್ದಿದ್ದಾರೆ. ಬಹುಪತ್ನಿತ್ವದ ಆಪಾದನೆ ಮೇಲೆ ಉತ್ತರ ಪ್ರದೇಶದ ಮಾಜಿ ಸಚಿವರಾದ ಚೌಧರಿ ಬಶೀರ್ ವಿರುದ್ಧ ಮುಸ್ಲಿಂ ಮಹಿಳೆಯರ ವಿವಾಹ ಕಾಯಿದೆ 2019 ಹಾಗೂ ಐಪಿಸಿಯ 504 ನೇ ವಿಧಿಯಡಿ ಪ್ರಕರಣ ದಾಖಲಿಸಲಾಗಿದೆ.

ಬಶೀರ್ ವಿರುದ್ಧ ಅವರ ಮೂರನೇ ಪತ್ನಿಯಾದ ನಗ್ಮಾ ದೂರು ದಾಖಲಿಸಿದ್ದಾರೆ.ಆಗ್ರಾದ ಮಂಟೋ ಲಾ ಠಾಣೆಯಲ್ಲಿ ಈ ಒಂದು ಪ್ರಕರಣವನ್ನು ದಾಖಲಿ ಸಿದ್ದಾರೆ

ಶಾಯಿಸ್ತಾ ಹೆಸರಿನ ಹುಡುಗಿಯನ್ನು ಆರನೇ ಮದುವೆಯಾಗಲು ಹೊರಟಿದ್ದ ಬಶೀರ್‌ನನ್ನು ತಡೆಯಲು ಮುಂದಾದ ವೇಳೆ ತನ್ನ ಮೇಲೆ ದೈಹಿಕ ಹಲ್ಲೆ ಮಾಡಿ ತ್ರಿವಳಿ ತಲಾಖ್ ಮೂಲಕ ವಿಚ್ಛೇದನ ನೀಡಿ ತನ್ನನ್ನು ಮನೆಯಿಂದ ಹೊರಗಟ್ಟಲು ನೋಡಿದ್ದಾಗಿ ನಗ್ಮಾ ದೂರಿನಲ್ಲಿ ತಿಳಿಸಿದ್ದಾರೆ.

2012ರಲ್ಲಿ ತಾನು ಮದುವೆ ಮಾಡಿಕೊಂಡ ಬಶೀರ್ ಗೆ ಮಹಿಳೆಯರಿಗೆ ಕಿರುಕುಳ ಕೊಡುವುದು ಅಭ್ಯಾಸ ವಾಗಿಬಿಟ್ಟಿದೆ ಎಂದು ದೂರಿನಲ್ಲಿ ತಿಳಿಸಿರುವ ನಗ್ಮಾ ಮದುವೆಯಾದ ಬಳಿಕ ತಮ್ಮ ಮೇಲೆ ಬಹಳಷ್ಟು ಬಾರಿ ದೈಹಿಕ ಹಿಂಸೆ ಹಾಗೂ ಬಲವಂತದ ದೈಹಿಕ ಸಂಬಂಧಗಳನ್ನು ಹೊಂದುವಂತೆ ಮಾಡಿದ್ದಾಗಿ ಹೇಳಿದ್ದಾರೆ.

ಮಾಜಿ ಸಚಿವರ ವಿರುದ್ಧ ಸರಣಿ ಆಪಾದನೆಗಳನ್ನು ಮಾಡಿರುವ ನಗ್ಮಾ ಇದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಪೊಲೀಸರಿಂದ ಸಹಾಯ ಕೋರಿದ್ದಾರೆ.