ಬೆಂಗಳೂರು –
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವದ ವಿರುದ್ಧ ಬಹಿರಂಗವಾಗಿಯೇ ಧ್ವನಿ ಎತ್ತಿದವರಿಗೆ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟದಲ್ಲಿಯೂ ಅವಕಾಶ ಕೈ ತಪ್ಪಿದೆ. ಬಸನಗೌಡ ಪಾಟೀಲ್ ಯತ್ನಾಳ್, ಸಿ.ಪಿ. ಯೋಗೇ ಶ್ವರ್, ಅರವಿಂದ ಬೆಲ್ಲದ್ ಹೆಸರು ಸಚಿವ ಸ್ಥಾನಕ್ಕೆ ಕೇಳಿ ಬರುತ್ತಿತ್ತು.ಆದರೆ ಅಂತಿಮವಾಗಿ ಪ್ರಕಟವಾದ ಪಟ್ಟಿಯಲ್ಲಿ ಈ ಮೂವರ ಹೆಸರು ನಾಪತ್ತೆಯಾಗಿದೆ. ಆ ಮೂಲಕ ತಮ್ಮ ನಾಯಕತ್ವದ ವಿರುದ್ಧ ಧ್ವನಿ ಎತ್ತಿದವರಿಗೆ ಯಡಿಯೂರಪ್ಪ ಆಘಾತ ನೀಡಿದ್ದಾರೆ.
ಹೌದು ಒಂದು ಹಂತದಲ್ಲಿ ಅರವಿಂದ ಬೆಲ್ಲದ್ ಹೆಸರು ಮುಖ್ಯಮಂತ್ರಿ ಹುದ್ದೆಗೂ ಕೇಳಿ ಬಂದಿತ್ತು. ಆದರೆ ಈ ಸರಕಾರದಲ್ಲಿ ಸಚಿವ ಸ್ಥಾನ ಪಡೆಯಲು ಅವರಿಗೂ ಸಾಧ್ಯವಾಗಿಲ್ಲ.ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಆರಂಭದಿಂದಲೂ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೆ ತಮ್ಮ ಅಸಮಾಧಾನ ಹೊರಹಾ ಕುತ್ತಿದ್ದರು.
ಅಲ್ಲದೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗ ಲಿದೆ ಎಂಬ ಮಾತನ್ನು ಯತ್ನಾಳ್ ಅವರೇ ಮೊದಲ ಬಾರಿಗೆ ಹೇಳಿದ್ದರು.ಒಂದು ಹಂತದಲ್ಲಿ ತಮ್ಮನ್ನೆ ಹೈ ಕಮಾಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸಲಿದೆ ಎಂದೂ ಯತ್ನಾಳ್ ಭಾವಿಸಿದ್ದರು ಆದರೆ ಆಗಿದ್ದೇ ಬೇರೆ ಒಟ್ಟಾರೆ ಅಧಿಕಾರ ಇಲ್ಲದಿದ್ದರೂ ಕೂಡಾ ಯಡಿಯೂರಪ್ಪ ಇಲ್ಲೂ ಕೂಡಾ ತಾವೇ ಗೆಲುವು ಸಾಧಿಸಿದ್ದಾರೆ ನನ್ನ ಮಗನಿಗೆ ಮಂತ್ರಿ ಸ್ಥಾನ ಕೊಡದಿ ದ್ದರೂ ಪರವಾಗಿಲ್ಲ ಆ ಮೂವರಿಗೆ ಯಾವುದೇ ಕಾರಣಕ್ಕೂ ಸಚಿವ ಸ್ಥಾನ ಕೊಡಬಾರದು ಎಂದು ಹಠ ಹಿಡಿದಿದ್ದ BSY ಗೆದ್ದಿದ್ದಾರೆ