ಬಜೆಟ್ ನಲ್ಲಿ ಸಿಗದ 7ನೇ ವೇತನ ಆಯೋಗದ ಭರವಸೆ – ಹೇಳಿದ್ದೇನು ಮಾಡಿದ್ದೇನು ಹೀಗ್ಯಾಕೆ ರಾಜ್ಯದ ಸರ್ಕಾರಿ ನೌಕರರ ಅಸಮಾಧಾನ…..

Suddi Sante Desk
ಬಜೆಟ್ ನಲ್ಲಿ ಸಿಗದ 7ನೇ ವೇತನ ಆಯೋಗದ ಭರವಸೆ – ಹೇಳಿದ್ದೇನು ಮಾಡಿದ್ದೇನು ಹೀಗ್ಯಾಕೆ ರಾಜ್ಯದ ಸರ್ಕಾರಿ ನೌಕರರ ಅಸಮಾಧಾನ…..

ಬೆಂಗಳೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ನಮಗೂ ಏನಾದರೂ ಸಿಗುತ್ತದೆ ಎಂದುಕೊಂಡು ರಾಜ್ಯದ ಸಮಸ್ತ ಸರ್ಕಾರಿ ನೌಕರರು ತುಂಬಾ ಉತ್ಸಾಹ ದಿಂದ ಕಾಯುತ್ತಿ ದ್ದರು ದೊಡ್ಡ ದಾದ ಭರವಸೆ ಯನ್ನು ಇಟ್ಟುಕೊಂಡಿದ್ದರು.

ಈ ಕುರಿತು ಸರ್ಕಾರಿ ನೌಕರರು ಕೂಡಾ ಮುಷ್ಕರ ಆರಂಭ ಮಾಡಿದ್ದರು ಕರ್ನಾಟಕದ ಸರ್ಕಾರಿ ನೌಕರರು ಈ ವರ್ಷದ ಮಾರ್ಚ್‌ 1ರಿಂದ ಅನಿರ್ಧಿ ಷ್ಟಾವಧಿ ಮುಷ್ಕರ ಆರಂಭಿಸಿದ್ದರು.7ನೇ ವೇತನ ಆಯೋಗದ ಶಿಫಾರಸು ಜಾರಿ ಮತ್ತು ಹೊಸ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ, ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕೆಂದು ಪ್ರಮುಖ ಬೇಡಿಕೆಯಾಗಿತ್ತು.

ಆಗ ಅಂದಿನ ಮುಖ್ಯಮಂತ್ರಿ ಹಣಕಾಸು ಸಚಿವರೂ ಆಗಿದ್ದ ಬಸವರಾಜ ಬೊಮ್ಮಾಯಿ, ಸರ್ಕಾರಿ ನೌಕರರಿಗೆ ಮಧ್ಯಂತರವಾಗಿ ಶೇ 17ರಷ್ಟು ವೇತನ ಹೆಚ್ಚಳ ಮಾಡುವ ತೀರ್ಮಾ ನವನ್ನು ಘೋಷಣೆ ಮಾಡಿದ್ದರು.

ದೇಶದ ಬೇರೆ ಬೇರೆ ರಾಜ್ಯದಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿರುವ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಸಮಿತಿ ರಚನೆ ಮಾಡಲಾಗುತ್ತದೆ ಎಂದು ಹೇಳಿದ್ದರು.

ರಾಜ್ಯ ಸರ್ಕಾರ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವುದಾಗಿ ಸರ್ಕಾರಿ ನೌಕರರಿಗೆ ಕರ್ನಾಟಕ ವಿಧಾನಸಭೆ ಚುನಾವಣೆ ಸಮಯ ದಲ್ಲಿಯೂ ಭರವಸೆ ನೀಡಿತ್ತು ಇದೆಲ್ಲಾ ಈಗ ಹುಸಿಯಾಗಿದ್ದು ಈ ಒಂದು ವಿಚಾರ ದಲ್ಲಿ ರಾಜ್ಯದ ಸರ್ಕಾರಿ ನೌಕರರು ಅಸಮಾಧಾನ ಗೊಂಡಿದ್ದು ಆತಂಕ ದಲ್ಲಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.