ರಾಜ್ಯದ ಸರ್ಕಾರಿ ನೌಕರರ ವರ್ಗಾವಣೆ ವಿಚಾರದಲ್ಲಿ ಮಹತ್ವದ ಅಪ್ಡೇಟ್ – ಮತ್ತೊಂದು ಆತಂಕವನ್ನು ತಂದಿಟ್ಟ ಹೊಸ ಆದೇಶ…..

Suddi Sante Desk
ರಾಜ್ಯದ ಸರ್ಕಾರಿ ನೌಕರರ ವರ್ಗಾವಣೆ ವಿಚಾರದಲ್ಲಿ ಮಹತ್ವದ ಅಪ್ಡೇಟ್ – ಮತ್ತೊಂದು ಆತಂಕವನ್ನು ತಂದಿಟ್ಟ ಹೊಸ ಆದೇಶ…..

ಬೆಂಗಳೂರು

ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್ ರಾಜ್ ಇಲಾಖೆಯ ಎಲ್ಲಾ ಹಂತದ ಸರ್ಕಾರಿ ನೌಕರರ ವರ್ಗಾವಣೆ, ನಿಯೋಜನೆಗೆ ಸರ್ಕಾರದ ಅನುಮೋದನೆ ಕಡ್ಡಾಯಗೊಳಿಸಿ ಇಲಾಖೆ ಆದೇಶಿಸಿದೆ.

ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ನಿರ್ದೇಶನ ನೀಡಿದ್ದು ಜಿಲ್ಲಾ ಹಂತದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಯಾವುದಾ ದರೂ ವರ್ಗಾವಣೆ,ನಿಯೋಜನೆ ಪ್ರಸ್ತಾವನೆ ಇದ್ದಲ್ಲಿ, ಅಂತಹ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಸಿ, ಅನುಮೋದನೆ ಪಡೆಯಲು ತಿಳಿಸಿದ್ದಾರೆ.

ಇನ್ನೂ ನೌಕರರನ್ನು ಬೇರೆ ಇಲಾಖೆಗೆ ಅಥವಾ ಅನ್ಯ ಕಾರ್ಯನಿಮಿತ್ತ ಯಾವುದೇ ಪ್ರಾಧಿಕಾರ ದಿಂದ ಬಂದಂತ ನಿಯೋಜನೆ ಕೋರಿಕೆಗಳನ್ನು ಕೂಡ ಸರ್ಕಾರಕ್ಕೆ ಸಲ್ಲಿಸಿ ಆ ಬಳಿಕ ಸರ್ಕಾರದಿಂದ ಅನುಮೋದನೆಯನ್ನು ಪಡೆಯುವಂತೆ ನಿರ್ದೇ ಶಿಸಿದ್ದಾರೆ

ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋ ದನೆ ಪಡೆಯದ ಹೊರತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೌಕರರ ವರ್ಗಾವಣೆ,ನಿಯೋಜನೆ ಮಾಡುವಂ ತಿಲ್ಲ ಎಂಬುದಾಗಿ ಖಡಕ್ ಸೂಚನೆ ನೀಡಿದ್ದಾರೆ. ಈ ಮೂಲಕ ಸರ್ಕಾರಿ ನೌಕರರ ವರ್ಗ, ನಿಯೋ ಜನೆ ಸರ್ಕಾರದ ಅನುಮೋದನೆ ಕಡ್ಡಾಯಗೊ ಳಿಸಲಾಗಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.