ಶಿಕ್ಷಕರ ಸಮಸ್ಯೆ ಕುರಿತಂತೆ ತಡರಾತ್ರಿ ಅಧಿಕಾರಿಗಳನ್ನು ಭೇಟಿಯಾದ KSPSTA ಟೀಮ್ – ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ತಡರಾತ್ರಿ ತುರ್ತಾಗಿ ಅಧಿಕಾರಿಗಳನ್ನು ಭೇಟಿಯಾಗಿ ಚರ್ಚೆ ಮಾಡಿ ಅತಂತ್ರ ಸ್ಥಿತಿಯಲ್ಲಿರುವ ಶಿಕ್ಷಕರ ಪರವಾಗಿ ಧ್ವನಿ ಎತ್ತಿದ ನಾಯಕರು…..

Suddi Sante Desk
ಶಿಕ್ಷಕರ ಸಮಸ್ಯೆ ಕುರಿತಂತೆ ತಡರಾತ್ರಿ ಅಧಿಕಾರಿಗಳನ್ನು ಭೇಟಿಯಾದ KSPSTA ಟೀಮ್ – ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ತಡರಾತ್ರಿ ತುರ್ತಾಗಿ ಅಧಿಕಾರಿಗಳನ್ನು ಭೇಟಿಯಾಗಿ ಚರ್ಚೆ ಮಾಡಿ ಅತಂತ್ರ ಸ್ಥಿತಿಯಲ್ಲಿರುವ ಶಿಕ್ಷಕರ ಪರವಾಗಿ ಧ್ವನಿ ಎತ್ತಿದ ನಾಯಕರು…..

ಬೆಂಗಳೂರು

ಶಿಕ್ಷಕರ ಸಮಸ್ಯೆ ಕುರಿತಂತೆ ತಡರಾತ್ರಿ ಅಧಿಕಾರಿಗಳನ್ನು ಭೇಟಿಯಾದ KSPSTA ಟೀಮ್ – ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ತಡರಾತ್ರಿ ತುರ್ತಾಗಿ ಅಧಿಕಾರಿಗಳನ್ನು ಭೇಟಿ ಯಾಗಿ ಚರ್ಚೆ ಮಾಡಿ ಅತಂತ್ರ ಸ್ಥಿತಿಯಲ್ಲಿರುವ ಶಿಕ್ಷಕರ ಪರವಾಗಿ ಧ್ವನಿ ಎತ್ತಿದ ನಾಯಕರು.

ಹೌದು ರಾಜ್ಯದಲ್ಲಿ ಈಗಾಗಲೇ ಕೌನ್ಸಲಿಂಗ್ ಮೂಲಕ ಸಾಕಷ್ಟು ಪ್ರಮಾಣದಲ್ಲಿ ಶಿಕ್ಷಕರು ವರ್ಗಾವಣೆಗೊಂಡಿದ್ದಾರೆ.ಹೀಗೆ ವರ್ಗಾವಣೆ ಗೊಂಡಿರುವ ಶಿಕ್ಷಕರನ್ನು ಇನ್ನೂ ಕೂಡಾ ಬಿಡು ಗಡೆ ಮಾಡಿಲ್ಲ ಹೀಗಾಗಿ ಅದೇಷ್ಟೋ ಶಿಕ್ಷಕರು ಅತಂತ್ರವಾಗಿದ್ದಾರೆ.ಹೀಗೆ ಅತಂತ್ರ ಸ್ಥಿತಿಯಲ್ಲಿ ರುವ ಶಿಕ್ಷಕರ ಸಮಸ್ಯೆಗಳ ಕುರಿತಂತೆ ಕೊನೆಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕವು ಸ್ಪಂದಿಸಿದೆ.

ಹಲವಾರು ವರ್ಷಗಳಿಂದ ವರ್ಗಾವಣೆ ಭಾಗ್ಯ ವಿಲ್ಲದೇ ಒದ್ದಾಡುತ್ತಿದ್ದು ಶಿಕ್ಷಕರಿಗೆ ಕೊನೆಗೂ ಕೌನ್ಸಲಿಂಗ್ ಮೂಲಕ ವರ್ಗಾವಣೆ ನೀಡಲಾಗಿತ್ತು ವರ್ಗಾವಣೆಗೊಂಡು ಇನ್ನೇನು ತಾವು ಬಯಸಿದ ಸ್ಥಳಗಳಿಗೆ ಹೋಗಬೇಕು ಎನ್ನುಷ್ಟರಲ್ಲಿ ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಈವರೆಗೆ ವರ್ಗಾವಣೆಗೊಂಡಿರುವ ಶಿಕ್ಷಕರನ್ನು ಬಿಡುಗಡೆ ಗೊಳಿಸಿಲ್ಲ ಹೀಗಾಗಿ ಈ ಒಂದು ಸಮಸ್ಯೆಯನ್ನು ಅರಿತುಕೊಂಡ KSPSTA ನ ಟೀಮ್ ನ ನಾಯಕರು ತುರ್ತಾಗಿ ಅಧಿಕಾರಿಗಳನ್ನು ಭೇಟಿ ಯಾದರು.

ಮುಖ್ಯಮಂತ್ರಿಗಳ ನಿರ್ದೇಶನದಂತೆ ತಡರಾತ್ರಿ ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ರಾಮಯ್ಯ ಅವರನ್ನು ಭೇಟಿಯಾಗಿ ಸಮಸ್ಯೆ ಯನ್ನು ಗಮನಕ್ಕೆ ತಗೆದುಕೊಂಡು ಬಂದರು. ಕೌನ್ಸಲಿಂಗ್ ಮೂಲಕ ವರ್ಗಾವಣೆಗೊಂಡು ಅತಂತ್ರವಾಗಿರುವ ಶಿಕ್ಷಕರನ್ನು ಈ ಕೂಡಲೇ ಬಿಡುಗಡೆಗೊಳಿಸುವಂತೆ ಒತ್ತಾಯವನ್ನು ಮಾಡಿದರು.

ಇದರೊಂದಿಗೆ ಶಿಕ್ಷಕರ ಪರವಾಗಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ಧ್ವನಿ ಎತ್ತಲಾಯಿತು.ಇವರೊಂದಿಗೆ ಈ ಒಂದು ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾಧ್ಯಕ್ಷ ರಾದ ಸಿದ್ರಾಮ ಲೋಕನ್ನವರ,ಹಾಗೂ ಶಿಕ್ಷಣ ಸಚಿವರ ವಿಶೇಷ ಅಧಿಕಾರಿಗಳಾದ ಜಯಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.