ಹುಬ್ಬಳ್ಳಿ –
ಹು-ಧಾ ಮಹಾನಗರ ಪಾಲಿಕೆ ಚುನಾವಣೆಯ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದೆ.ಹೌದು ಹುಬ್ಬಳ್ಳಿಯ ಕೈ ಪಕ್ಷದ ಕಚೇರಿಯಲ್ಲಿ ನಡೆದ ಸಮಾರಂಭ ದಲ್ಲಿ ಪಕ್ಷದ ನಾಯಕರು ಈ ಒಂದು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು
ಈಗ ಚುನಾವಣಾ ಪ್ರಣಾಳಿಕೆಯನ್ನು ಕೈ ಪಡೆ ಬಿಡುಗಡೆ ಮಾಡಿದೆ.23 ಅಂಶಗಳಿರುವ ಈ ಒಂದು ಪ್ರಣಾಳಿಕೆಯನ್ನು ಮಾಜಿ ಸಚಿವ ಆರ್ ವಿ ದೇಶಪಾಂಡೆ ಸೇರಿದಂತೆ ಹಲವರು ಬಿಡುಗಡೆ ಮಾಡಿದರು.
ಕಾರವಾರ ರಸ್ತೆಯಲ್ಲಿರುವ ಕಾಂಗ್ರೆಸ್ ಪಕ್ಷದ ಕಚೇರಿ
ಯಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಯಿ ತು ಜನರ ಆರೋಗ್ಯ, ಮೂಲಭೂತ ಸೌಕರ್ಯ, ರಾಜಕಾಲುವೆ ದುರಸ್ತಿ, ಕ್ರೀಡಾಂಗಣ ನಿರ್ಮಾಣವೇ ಪ್ರಮುಖ ಅಂಶಗಳಾಗಿ ವೆ
ಪಾಲಿಕೆ ಚುನಾವಣೆ ಉಸ್ತುವಾರಿ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಆರ್.ವಿ.ದೇಶಪಾಂಡೆ,ಎಐಸಿಸಿ ಯಿಂದ ನೇಮಕಗೊಂಡಿರುವ ಚುನಾವಣೆ ವೀಕ್ಷಕ, ಅಂಡಮಾನ್-ನಿಕೋಬಾರ್ ಸಂಸದ ಕುಲದೀಪ ರೈ ಶರ್ಮಾ,ಕೆಪಿಸಿಸಿ ಕಾರ್ಯಾಧ್ಯಕ್ಷರ ಧ್ರುವನಾರಾ ಯಣ, ಶಾಸಕ ಪ್ರಸಾದ ಅಬ್ಬಯ್ಯ,ಶ್ರೀನಿವಾಸ ಮಾನೆ ಸೇರಿದಂತೆ ಹಲವರು ಈ ಒಂದು ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದರು