ನವದೆಹಲಿ –
ಕೊರೊನಾ ಸಂಕಷ್ಟದ ನಡುವೆ ಅಗತ್ಯ ವಸ್ತುಗಳ ಬೆಲೆ ಏರಿಕೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೆ ಇದೆ.ಬೆಲೆ ಏರಿಕೆಯಿಂದ ಈಗಾಗಲೇ ಕಂಗಾಲಾಗಿ ರುವ ಜನರಿಗೆ ಮತ್ತೆ ಬೆಲೆ ಏರಿಕೆಯ ಬಿಸಿಯನ್ನು ಕೇಂದ್ರ ಸರ್ಕಾರ ನೀಡಿದೆ.ಹೌದು ಸಬ್ಸಿಡಿ ರಹಿತ ಗೃಹ ಬಳಕೆಯ ಸಿಲಿಂಡರ್ ಬೆಲೆಯನ್ನು ಮತ್ತೆ ಏರಿಕೆ ಮಾಡಲಾಗಿದೆ.ಸೆಪ್ಟೆಂಬರ್ 01ರಿಂದ ಅಡುಗೆ ಅನಿಲ ಪ್ರತಿ ಸಿಲಿಂಡರ್ ಮೇಲೆ ಹೆಚ್ಚುವರಿ 25 ರೂರಾಯಿ ಹೆಚ್ಚಳವನ್ನು ಮಾಡಲಾಗಿದೆ.
ಪರಿಷ್ಕೃತ ದರ ಪಟ್ಟಿ ಬುಧವಾರದಿಂದಲೇ ಜಾರಿಗೆ ಬರಲಿದೆ ಎಂದು ಸರ್ಕಾರಿ ಸ್ವಾಮ್ಯದ ಪೆಟ್ರೋಲಿ ಯಂ ಕಂಪನಿಗಳು ಹೇಳಿವೆ. ಸಬ್ಸಿಡಿ ರಹಿತ ಗೃಹ ಬಳಕೆಯ ಸಿಲಿಂಡರ್ ಬೆಲೆಯನ್ನು 25 ರೂ. ಏರಿಕೆ ಮಾಡಿದ್ದಲ್ಲದೆ,ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆ 75 ರೂ. ನಷ್ಟು ಏರಿಸಲಾಗಿದೆ.ಬೆಲೆ ಹೆಚ್ಚಳದ ಬಳಿಕ ರಾಜಧಾನಿ ದೆಹಲಿಯಲ್ಲಿ ಗೃಹ ಬಳಕೆ ಎಲ್ ಪಿ ಜಿ ಸಿಲಿಂಡರ್ ಬೆಲೆ 884.50 ರು ಪ್ರತಿ ಸಿಲಿಂಡರ್ ಆಗಿದೆ. ಜುಲೈ 1ರಂದು ಸಿಲಿಂಡರ್ ಬೆಲೆ 25.50 ರು ಹೆಚ್ಚಿಸಲಾಗಿತ್ತು.
ಆಗಸ್ಟ್ 17ರಂದು ಮತ್ತೊಮ್ಮೆ 25 ರು ಹೆಚ್ಚಳ ವಾಗಿತ್ತು.ಬೆಂಗಳೂರು ನಗರದಲ್ಲಿ ಆಗಸ್ಟ್ ತಿಂಗಳಲ್ಲಿ ಗೃಹ ಬಳಕೆಯ 14.2 ಕೆಜಿ ಸಿಲಿಂಡರ್ ಬೆಲೆ 837.50 ರೂ.ಗಳಿಂದ 863 ರೂ.ಗಳಿಗೆ ಏರಿಕೆಯಾಗಿತ್ತು. ಸೆ.1ರಿಂದ 888.20 ರು ನೀಡಬೇಕಾಗುತ್ತದೆ. ಮೇ 1, 2014ರಲ್ಲಿ 410.50 ರು ಇದ್ದ ಸಿಲಿಂಡರ್ ಬೆಲೆ ದ್ವಿಗುಣವಾಗಿ ಈಗ ಸರಾಸರಿ 859.50 ರು ನಷ್ಟಾಗಿದೆ. ಪೆಟ್ರೋಲಿಯಂ ಕಂಪನಿಗಳು ಪ್ರತಿ ತಿಂಗಳ 1 ಮತ್ತು 15ನೇ ತಾರೀಕಿನ ಬಳಿಕ ಸಿಲಿಂಡರ್ ಬೆಲೆಯನ್ನು ಪರಿಷ್ಕರಣೆ ಮಾಡುತ್ತವೆ. ಬೆಲೆ ಏರಿಕೆಯಾಗುತ್ತಲೇ ಹೋಗುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದ ಜನರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.