ಮಾಜಿ ಸಚಿವ ಮುರಗೇಶ ನಿರಾಣಿ ತಾಯಿ ನಿಧನ – ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಶಿಲಾಬಾಯಿ ನಿಧನಕ್ಕೆ ಸಂತಾಪ…..

Suddi Sante Desk
ಮಾಜಿ ಸಚಿವ ಮುರಗೇಶ ನಿರಾಣಿ ತಾಯಿ ನಿಧನ – ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಶಿಲಾಬಾಯಿ ನಿಧನಕ್ಕೆ ಸಂತಾಪ…..

ಬಾಗಲಕೋಟೆ

ಬಿಜೆಪಿ ರಾಜ್ಯ ಉಪಾಧ್ಯಕ್ಷ,ಮಾಜಿ ಸಚಿವ ಮುರುಗೇಶ್ ನಿರಾಣಿ ಅವರಿಗೆ ಮಾತೃ ವಿಯೋಗ ವಾಗಿದೆ ಹೌದು ನಿರಾಣಿ ಅವರ ತಾಯಿ ಸುಶಿಲಾ ಬಾಯಿ(೭೮) ವಿಧಿವಶರಾಗಿದ್ದಾರೆ.ವಯೋಸಹಜ ಖಾಯಿಲೆಯಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ವಿಧಿವಶರಾಗಿದ್ದಾರೆ.ನಿರಾಣಿ ಅವರ ಸ್ವಗ್ರಾಮ ಬಸವಹಂಚಿನಾಳದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ.ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಬಸವ ಹಂಚನಾಳ ಗ್ರಾಮ ದಲ್ಲಿ ಈ ಒಂದು ಕಾರ್ಯವು ನಡೆಯಲಿದೆ.

ಕಳೆದ ಹತ್ತು ದಿನಗಳಿಂದ ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ‌ಪಡೆಯುತ್ತಿದ್ದರು ಸುಶೀಲಾ ಭಾಯಿ ರುದ್ರಪ್ಪ ನಿರಾಣಿ ಅವರಿಗೆ ಐವರು ಗಂಡು ಮಕ್ಕಳು,ಇಬ್ಬರು ಹೆಣ್ಣು‌ಮಕ್ಕಳಿದ್ದಾರೆ. ಐವರು ಸೊಸೆಯಂದಿರು 14 ಜನ ಮೊಮ್ಮಕ್ಕ ಳನ್ನು ಅಗಲಿದ್ದಾರೆ ಸುಶಿಲಾಬಾಯಿ.

ಸುಶಿಲಾಬಾಯಿ ಅವರ ಅಗಲಿಕೆಯಿಂದ ದುಃಖದಲ್ಲಿ‌ ಮುಳುಗಿದ ನಿರಾಣಿ ಅಪಾರ ಬಂಧು ಬಳಗ ಇತ್ತ ಬಿಜೆಪಿ ಕಾರ್ಯಕರ್ತರು ಮುಖಂಡರ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬಾಗಲಕೋಟ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.