ಧಾರವಾಡ –
ತುಂಬು ಜೀವನ ನಡೆಸಿದ ಸತಿ-ಪತಿಗಳಿಬ್ಬರು ಸಾವಿನಲ್ಲೂ ಒಂದಾಗಿರುವ ಚಿತ್ರಣವೊಂದು ಧಾರವಾಡದಲ್ಲಿ ನಡೆದಿದೆ.ಹೌದು! ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ನಾಗರಳ್ಳಿ ಗ್ರಾಮವೇ ಇಂಥಹ ಚಿತ್ರಣವೊಂದು ಕಂಡು ಬಂದಿದೆ. ಚನ್ನಬಸನಗೌಡ ದ್ಯಾಮನಗೌಡರ ವಯಸ್ಸು 80 ಹಾಗೂ ನೀಲವ್ವ ದ್ಯಾಮನಗೌಡರ ವಯಸ್ಸು 75 ಇವರಿಬ್ಬರೂ ಸಾವಿನಲ್ಲಿ ಒಂದಾದ ದಂಪತಿಗಳಾಗಿದ್ದಾರೆ.
ನವಲಗುಂದ ತಾಲೂಕಿನ ನಾಗರಳ್ಳಿ ಗ್ರಾಮದವರಾಗಿದ್ದಾರೆ. ಚನ್ನಬಸನಗೌಡನಿಗೆ ಹುಷಾರಿಲ್ಲದ ಕಾರಣ ಕಳೆದ ಹಲವು ದಿನಗಳಿಂದ ಹಾಸಿಗೆ ಹಿಡಿದಿದ್ರಂತೆ. ಇವರ ಆರೈಕೆ ಮಾಡುತ್ತಿದ್ದ ಧರ್ಮಪತ್ನಿ ನೀಲವ್ವ ನಿನ್ನೆ ಹೃದಯಾಘಾತದಿಂದ ನಿಧನರಾದ್ರು. ಹೆಂಡತಿ ಸಾವೀನ ಸುದ್ದಿ ಕೇಳುತ್ತಿದ್ದಂತೆ ಇತ್ತ ಚನ್ನಬಸನಗೌಡ ಈ ವಿಷಯ ತಿಳಿದು ಸಾವಿಗೀಡಾಗಿದ್ದಾರೆ. ಚನ್ನಬಸನಗೌಡ ಪತ್ನಿ ಕಣ್ಮುಚ್ಚಿದ ಕೇವಲ ನಾಲ್ಕು ಗಂಟೆಯಲ್ಲೇ ಕೊನೆಯುಸಿರೆಳೆದಿದ್ದಾರೆ.ಈ ಮೂಲಕ ಇಬ್ಬರೂ ಸಾವಿನಲ್ಲಿ ಒಂದಾಗಿದ್ದಾರೆ.
ಇನ್ನೂ ದಂಪತಿಗಳ ಸಾವಿನ ಸುದ್ದಿ ಗೊತ್ತಾದ ಕೂಡಲೇ ಇಡೀ ಗ್ರಾಮದ ಜನ ಸೇರಿಕೊಂಡು ಸತಿ-ಪತಿಯನ್ನು ಮೆರವಣಿಗೆ ಮಾಡಿ ಒಂದೇ ಕಡೆ ಅವರ ಅಂತಿಮ ಸಂಸ್ಕಾರ ಮಾಡಿದ್ದಾರೆ. ಮೂಲಕ ತಮ್ಮ ಜೀವನದಲ್ಲಿ ಸಾರ್ಥಕತೆ ಮೆರೆದಿದ್ದಾರೆ. ಇನ್ನೂ ಇಬ್ಬರ ದಂಪತಿಗಳನ್ನು ಇಡೀ ಗ್ರಾಮವೇ ಒಂದಾಗಿ ಗ್ರಾಮದ ತುಂಬೆಲ್ಲಾ ಮೆರವಣಿಗೆ ಮಾಡಿದ್ರು. ಅಕ್ಕಪಕ್ಕವೇ ಕೂಡಿಸಿ ದಂಪತಿಗಳ ಕೊನೆಯ ಅಂತಿಮ ಯಾತ್ರೆಯನ್ನು ನಾಗರಳ್ಳಿ ಗ್ರಾಮಸ್ಥರು ಮಾಡಿದ್ರು.