ಹುಬ್ಬಳ್ಳಿ –
ಹುಬ್ಬಳ್ಳಿಯಲ್ಲಿ ಬೀದಿ ದನಗಳ ಹಾವಳಿ ಹೆಚ್ಚಾಗಿದೆ. ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು ಜವಳಿ ಸಾಲಿನಲ್ಲಿ ವ್ಯಕ್ತಿಯೊಬ್ಬ ದನಗಳ ಕಾಲಿಗೆ ಸಿಕ್ಕು ಪಾರಾಗಿ ಬಂದಿದ್ಸಾನೆ. ನಡೆದುಕೊಂಡು ಹೋಗುವಾಗ ವ್ಯಕ್ತಿಯೊಬ್ಬನಿಗೆ ಬಿಡಾಡಿ ದನಗಳ ಕೊಂಬು ಬಡಿದೆ .ಕೊಂಬು ಬಡಿದಿದೆ ಎಂದುಕೊಂಡ ವ್ಯಕ್ತಿ ಪಕ್ಕದಲ್ಲಿ ಸರಿದಿದ್ದಾನೆ.ಪಕ್ಕಕ್ಕೆ ಸರಿಯುತ್ತಿದ್ದಂತೆ ಹಿಂದಿನಿಂದ ಬಂದ ಬೈಕ್ ಸವಾರ ವ್ಯಕ್ತಿಗೆ ಬಡಿದು ನೆಲಕ್ಕೆ ಬಿದ್ದಿದ್ದಾನೆ.
ಬೀಳುತ್ತಿದ್ದಂತೆ ಮೂರು ನಾಲ್ಕು ದನಗಳು ಸೇರಿಕೊಂಡು ನೆಲದಲ್ಲಿ ತುಳಿದಿವೆ. ಬಿಡಾಡಿ ದನ ಕರುಗಳಿಂದ ಪಾದಾಚಾರಿಗಳಿಗೆ ತೊಂದರೆ ಹೆಚ್ವಾಗುತ್ತಿದೆ.ಜವಳಿ ಸಾಲ ಘಂಟಿಕೇರಿ ಪೊಲೀಸ್ ಠಾಣೆ ಹತ್ತಿರ ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುವಾಗ ಈ ಒಂದು ಘಟನೆ ನಡೆದಿದೆ.
ಕೊಂಬಿನಿಂದ ತಿವಿದ ಆಕಳು ಹಾಯಲು ಹೋದಾಗ ಭಯದಿಂದ ಪಕ್ಕಕ್ಕೇ ಸರಿದ ವ್ಯಕ್ತಿ ಸಾವಿನ ದಾರಿಯಿಂದ ಬಂದು ಪಾರಾಗಿದ್ದಾರೆ.ಪಕ್ಕಕ್ಕೇ ಸರಿಯುತ್ತಿದ್ದಂತೆ ಹಿಂದಿನಿಂದ ಬಂದ ಬೈಕ್ ಪಾದಚಾರಿಗೆ ಡಿಕ್ಕಿ ಬೈಕ್ ನಲ್ಲಿದ್ದ ದಂಪತಿಗಳಿಬ್ಬರು ಆಯತಪ್ಪಿ ಬಿದ್ದಿದ್ದಾರೆ.ಇಬ್ಬರು ದಂಪತಿಗಳು ನೆಲಕ್ಕೇ ಬಿಳುತ್ತಿದ್ದಂತೆ ಮತ್ತೇ ಎದ್ದು ಹೊರಟು ಹೋಗಿದ್ದಾರೆ ದಂಪತಿಗಳು.ಬೈಕನಿಂದ ಬಿದ್ದು ಎದ್ದು ಹೋಗುತ್ತಿದ್ದಂತೆ ಇತ್ತ ನೆಲಕ್ಕೇ ಬಿದ್ದ ಪಾದಚಾರಿಯನ್ನು ದನಗಳು ಹಿಗ್ಗಾ ಮುಗ್ಗಾ ತುಳಿದಿವೆ. ನೆಲಕ್ಕೆ ಬಿದ್ದ ವ್ಯಕ್ತಿಯ ಮೇಲೆ ಎರಡು ಮೂರು ದನಗಳು ಅಟ್ಯಾಕ್ ಮಾಡಿ ನೆಲಕ್ಕೇ ತುಳಿದು ಬಿಡದೇ ಕೊಂಬಿನಿಂದ ತಿವಿದು ತುಳಿದಿವೆ.ದನಗಳ ದೃಶ್ಯಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆ ನಂತರ ಸಾರ್ವಜನಿಕರಿಂದ ವ್ಯಕ್ತಿಯ ರಕ್ಷಣೆ ದನಗಳನ್ನು ಬಡಿದು ವ್ಯಕ್ತಿಯನ್ನು ಕಾಪಾಡಿದಿ ಸಾರ್ವಜನಿಕರುದಿನದಿಂದ ದಿನಕ್ಕೇ ಇಂಥಹ ಘಟನೆಗಳು ನಗರದಲ್ಲಿ ನಡೆಯುತ್ತಿದ್ದರು ಸುಮ್ಮನೆ ಕುಳಿತ ಪಾಲಿಕೆಯ ಅಧಿಕಾರಿಗಳು ಪಾಲಿಕೆಯ ಅಧಿಕಾರಿಗಳು ಮಾತ್ರ ಬಿಡಾಡಿ ದನಗಳನ್ನು ಮಾತ್ರ ವಶಕ್ಕೆ ಪಡೆಯದೆ ಸುಮ್ಮನಿರುವುದಕ್ಕೆ ಸಾರ್ವಜನಿಕರು ಪಾಲಿಕೆಯ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ