ಶಿಗ್ಗಾವಿಯಲ್ಲಿ ಅರ್ಥಪೂರ್ಣವಾಗಿ ನಡೆಯಿತು ಶಿಕ್ಷಕರ ದಿನಾಚರಣೆ ಸಮಾರಂಭ – ನಿವೃತ್ತ ಶಿಕ್ಷಕರಿಗೆ ಸನ್ಮಾನ ದೊಂದಿಗೆ ಶಿಕ್ಷಕರ ದಿನಾಚರಣೆಗೆ ಸಾಕ್ಷಿಯಾದ್ರು ಗಣ್ಯರು ಶಿಕ್ಷಕ ಬಂಧುಗಳು…..

Suddi Sante Desk
ಶಿಗ್ಗಾವಿಯಲ್ಲಿ ಅರ್ಥಪೂರ್ಣವಾಗಿ ನಡೆಯಿತು ಶಿಕ್ಷಕರ ದಿನಾಚರಣೆ ಸಮಾರಂಭ – ನಿವೃತ್ತ ಶಿಕ್ಷಕರಿಗೆ ಸನ್ಮಾನ ದೊಂದಿಗೆ ಶಿಕ್ಷಕರ ದಿನಾಚರಣೆಗೆ ಸಾಕ್ಷಿಯಾದ್ರು ಗಣ್ಯರು ಶಿಕ್ಷಕ ಬಂಧುಗಳು…..

ಶಿಗ್ಗಾವಿ

ಶಿಗ್ಗಾವಿಯಲ್ಲಿ ಅರ್ಥಪೂರ್ಣವಾಗಿ ನಡೆಯಿತು ಶಿಕ್ಷಕರ ದಿನಾಚರಣೆ ಸಮಾರಂಭ – ನಿವೃತ್ತ ಶಿಕ್ಷಕರಿಗೆ ಸನ್ಮಾನ ದೊಂದಿಗೆ ಶಿಕ್ಷಕರ ದಿನಾಚರಣೆಗೆ ಸಾಕ್ಷಿಯಾದ್ರು ಗಣ್ಯರು ಶಿಕ್ಷಕ ಬಂಧುಗಳು

ಶಿಕ್ಷಕರ ದಿನಾಚರಣೆ ಯನ್ನು ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಅರ್ಥಪೂರ್ಣವಾಗಿ ಆಚರಣೆಯನ್ನು ಮಾಡಲಾಯಿತು.ಶಿಗ್ಗಾವಿ ತಾಲ್ಲೂಕಿನ ಗಂಜೀಗಟ್ಟಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮ ರದ ಉದ್ಘಾಟನೆ ಮಾಡಿದರು.

ಇದೇ ವೇಳೆ ಮಾತನಾಡಿದ ಅವರು ಶಿಕ್ಷಕರು ಸದೃಢ ನಾಡು ನಿರ್ಮಾಪಕರಾಗಿದ್ದು ಗುರುವಿನ ಅನುಗ್ರಹದಿಂದ ಪ್ರತಿ ಕಾರ್ಯಗಳು ಸುಮಗವಾಗಿ ಸಾಗಲು ಸಾಧ್ಯವಿದೆ. ಹೀಗಾಗಿ ಗುರುವಿನ ಸಂದೇಶಗಳನ್ನು ಅರಿತು ಅವರ ಮಾರ್ಗದರ್ಶದಲ್ಲಿ ನಡೆದಾಗ ಬದುಕು ಯಶಸ್ವಿಯಾ ಗಲು ಸಾಧ್ಯವಿದೆ ಎಂದರು.

ಬಿಇಒ ಅಂ.ಬಿ.ಅಂಬಿಗೇರ, ತಹಶೀಲ್ದಾರ್ ಸಂತೋಷ ಹಿರೇಮಠ, ತಾಪಂ.ಇಒ ಪಿ.ವಿಶ್ವನಾಥ, ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ ಸೇರಿದಂತೆ ಹಲವು ಗಣ್ಯರು ಈ ಒಂದು ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಿಕ್ಷಕರಿಗೆ ದಿನಾಚರಣೆಯ ಶುಭಾಶಯ ಗಳನ್ನು ತಿಳಿಸುತ್ತಾ ಮಾತನಾಡಿ ಶುಭವನ್ನು ಕೋರಿದರು

ಕಾರ್ಯಕ್ರಮದ ಸಾನಿಧ್ಯವನ್ನು ಗಂಜೀಗಟ್ಟಿ ಗುರುಚರ ಮೂರ್ತೇಶ್ವರ ಮಠದ ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಿಗ್ಗಾವಿ ವಿರಕ್ತಮಠದ ಸಂಗನಬಸವ ಸ್ವಾಮೀಜಿ ಸಾನ್ನಿಧ್ಯವನ್ನು ವಹಿಸಿದ್ದರು. ಹುಬ್ಬಳ್ಳಿ ಸರ್ಕಾರಿ ಕಾಲೇಜಿನ ಪ್ರಾಚಾರ್ಯ ಎಫ್.ಬಿ. ಸೊರಟೂರ ಉಪನ್ಯಾಸ ನೀಡಿದರು.

ಇದೇ ವೇಳೆ ಸೇವೆಯನ್ನು ಸಲ್ಲಿಸಿ ನಿವೃತ್ತಗೊಂಡ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಪುರಸಭೆ ಉಪಾಧ್ಯಕ್ಷೆ ಶಾಂತಾಬಾಯಿ ಸುಭೆದಾರ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಅರುಣ ಹುಡೇದ ಗೌಡ್ರ, ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎಫ್.ಸಿ. ಕಾಡಪ್ಪಗೌಡ್ರ, ಶಿಕ್ಷಣ ಸಮನ್ವಯಾಧಿಕಾರಿ ಗೀತಾಂಜಲಿ ತೆಪ್ಪದ,

ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರತಾಪ ನಾಯಕ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ನಾಗಪ್ಪ ಬೆಂತೂರ, ಅಕ್ಷರ ದಾಸೋಹ ಅಧಿಕಾರಿ ಮಂಜುನಾಥ ಸಾಳುಂಕೆ ಸೇರಿ ದಂತೆ ವಿವಿಧ ಶಿಕ್ಷಕರ ಸಂಘಟನೆಗಳ, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ತಾಲ್ಲೂಕಿನ ಸರ್ವ ಶಿಕ್ಷಕ ಬಂಧುಗಳು ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಶಿಗ್ಗಾವಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.