ಬೆಂಗಳೂರು –
ಶಿಕ್ಷಕರ ಕಲ್ಯಾಣ ನಿಧಿಯ ಮಹತ್ವದ ಸಮಿತಿಯ ಸಭೆ ಬೆಂಗಳೂರಿ ನಲ್ಲಿ ನಡೆಯಿತು.ಶಿಕ್ಷಣ ಸಚಿವ ಬಿ.ಸಿ.ನಾಗೇಶ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ ಡಾ.ವಿಶಾಲರವರು ಆಯುಕ್ತರು ಇವರ ನೇತೃತ್ವದಲ್ಲಿ ಈ ಒಂದು ಸಭೆ ಜರುಗಿತು.ಸಭೆಯಲ್ಲಿ ಹಲವಾರು ವಿಷಯ ಗಳನ್ನು ಚರ್ಚೆ ಮಾಡಿ ಕೆಲವು ಮಹತ್ವದ ತೀರ್ಮಾನ ಗಳನ್ನು ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ತಗೆದುಕೊಂಡ ಕೆಲವು ನಿರ್ಣಯ ಗಳು ಈ ಕೆಳಗಿನಂತೆ ಇವೆ. ಶಿಕ್ಷಕರ ಸದನದಲ್ಲಿ ಕೊಠಡಿಗಳನ್ನು Online Booking ಮಾಡಲು ತೀರ್ಮಾನಿಸಲಾಯಿತು.
ಶಿಕ್ಷಕರ ಸದನದ ಕೊಠಡಿಗಳ ನವೀಕರಣ ಮಾಡಲು ತೀರ್ಮಾನಿಸಲಾಯಿತು.
ಶಿಕ್ಷಕರ ಕಲ್ಯಾಣ ನಿಧಿಯ ಸೌಲಭ್ಯಗಳಾದ ಅಜೀವ ಸದಸ್ಯತ್ವ, ಸ್ಕಾಲರ್ ಶಿಪ್, ವೈದ್ಯಕೀಯ ವೆಚ್ಚ, ಇನ್ನುಳಿದ ಸೌಲಭ್ಯಕ್ಕೆ Online ನಲ್ಲಿ ಅರ್ಜಿ ಸಲ್ಲಿಸಲು ವ್ಯವಸ್ಥೆ ಮಾಡುವುದು.
ಶಿಕ್ಷಕರಿಗೆ ಸಹಪಠ್ಯ ಜೊತೆಗೆ ಕ್ರೀಡಾಕೂಟಗಳನ್ನು ಆಯೋಜಿಸಲು ತೀರ್ಮಾನಿಸಲಾಯಿತು.
ಈ ವರ್ಷ ರಾಜ್ಯ ಪ್ರಶಸ್ತಿ ಪಡೆದ ಶಿಕ್ಷಕರ ಶಾಲೆಗಳಿಗೆ 50,000 ರೂಪಾಯಿ ನೀಡಲಾಗಿದೆ. ಕಳೆದ ವರ್ಷ ಪ್ರಶಸ್ತಿ ಪಡೆದ ಶಿಕ್ಷಕರ ಶಾಲೆಗಳಿಗೂ ಕೂಡಾ 50,000 ರೂಪಾಯಿ ಬಿಡುಗಡೆಗೊಳಿಸಲು ತೀರ್ಮಾನಿಸಲಾಯಿತು.
ಇನ್ನೂ ಈ ಒಂದು ಸಭೆಯಲ್ಲಿ ಅತ್ಯುತ್ತಮ ತೀರ್ಮಾನ ತೆಗೆದುಕೊಂಡ ಶಿಕ್ಷಣ ಸಚಿವರಿಗೆ ಪ್ರಧಾನ ಕಾರ್ಯದರ್ಶಿ ಗಳಿಗೆ,ಆಯುಕ್ತರಿಗೆ ಅನಂತ ಧನ್ಯವಾದಗಳೆಂದು KSPSTA ಸಂಘದ ಅಧ್ಯಕ್ಷರಾಗಿರುವ ಶಂಭುಲಿಂಗನಗೌಡ ಪಾಟೀಲ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಗಲಿ ಹೇಳಿದ್ದಾರೆ.ಈ ಒಂದು ಸಭೆಯಲ್ಲಿ ನಿಂಗೆಗೌಡ್ರು, ಮಂಜುನಾಥ,ಅಂಜನಪ್ಪ ,ಶಿಕ್ಷಕರ ಕಲ್ಯಾಣ ನಿಧಿಯ ಅಧಿಕಾರಿಗಳು ಉಪಸ್ಥಿತರಿದ್ದರು.